ಮೈಸೂರಿನಲ್ಲಿ ಐಸೋಲೇಷನ್ ವಾರ್ಡ್ ಗಳಾದ ರೈಲ್ವೆ ಬೋಗಿಗಳು..

ಮೈಸೂರು: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈಲ್ವೆ ಬೋಗಿಗಳನ್ನು ಐಸೋಲೇಷನ್ ವಾರ್ಡ್ಗಳನ್ನಾಗಿ ಸಿದ್ದಪಡಿಸಿರುವ ಬೆನ್ನಲ್ಲೇ ಇದೀಗ ಮೈಸೂರಿನಲ್ಲೂ ಕೂಡ ರೈಲ್ವೆ ಇಲಾಖೆ ಈ ಕಾರ್ಯ ಕೈಗೊಂಡಿದೆ.
ಸದ್ಯ ಕೇಂದ್ರ ರೈಲ್ವೆ ಸಚಿವಾಲಯದ ಆದೇಶ ಮೇರೆಗೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ ೩೦ ಬೋಗಿ ಹಾಗೂ ಅಶೋಕಪುರಂನಲ್ಲಿ ೯೬ ಬೋಗಿಗಳನ್ನು ಐಸೋಲೇಷನ್ ವಾರ್ಡ್ಗೆ ಸಿದ್ಧ ಮಾಡಲಾಗುತ್ತಿದೆ.
ಇನ್ನು ರೈಲ್ವೆ ಇಲಾಖೆ ಸಿದ್ಧ ಮಾಡುತ್ತಿರುವ ಐಸೋಲೇಷನ್ ವಾರ್ಡ್ನಲ್ಲಿ ಒಂದು ಬೋಗಿಯಲ್ಲಿ ೮ ಮಂದಿಗೆ ಮಾತ್ರ ಪ್ರಾಥಮಿಕ ಚಿಕಿತ್ಸೆ ನೀಡಲಾಗುವುದು. ಒಂದು ಬೋಗಿಯಲ್ಲಿ ಒಬ್ಬ ವೈದ್ಯ ಹಾಗೂ ಇಬ್ಬರು ನರ್ಸ್ ಇರಲಿದ್ದಾರೆ.
ಇದಲ್ಲದೆ,ಒಂದು ಬೋಗಿಯೊಳಗೆ ೭ ರಿಂದ ೮ ಮಂದಿಗೆ ಚಿಕಿತ್ಸೆ ನೀಡಬಹುದಾಗಿದೆ. ಅದೇ ಬೋಗಿಯೊಳಗೆ ಚಿಕಿತ್ಸೆ ನೀಡುವ ವೈದ್ಯರಿಗು ಅವಕಾಶ ಇದೆ. ಬೋಗಿಯ ಕಿಟಕಿಗಳಿಗೆ ಮೆಸ್ ಹಾಕಲಾಗಿದೆ. ರೈಲ್ವೆ ಇಲಾಖೆ ಏಪ್ರಿಲ್ ೧೪ರೊಳಗೆ ಸರ್ಕಾರಕ್ಕೆ ಬೋಗಿಗಳನ್ನು ಹಸ್ತಾಂತರ ಮಾಡಲಿದೆ.

Please follow and like us:

Related posts

Leave a Comment