ಇಂದು ಮತ್ತೆ 12 ಕೊರೊನಾ ಕೇಸ್..

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಮತ್ತೆ ೧೨ ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ ೧೬೩ಕ್ಕೇರಿಕೆಯಾಗಿದೆ.
ಬೆಂಗಳೂರಿನ ೩೨ ವರ್ಷದ ಯುವಕ, ಕೇರಳದ ೬೨ ವರ್ಷದ ಮಹಿಳೆ, ಮೈಸೂರಿನ ೭ ಮಂದಿಯಲ್ಲಿ ಮತ್ತು ಬಾಗಲಕೋಟೆಯಲ್ಲಿ ಇಬ್ಬರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಪ್ರಕರಣ ಪತ್ತೆಯಾಗಿವೆ.
ಇದೇ ವೇಳೆ ಹಾಸನದ ವೈದ್ಯಕೀಯ ಸಂಸ್ಥೆ, ಮೈಸೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸೇರಿದಂತೆ ಕೆಲ ಆಸ್ಪತ್ರೆಗಳಲ್ಲಿ ೧೦ ಪ್ರಯೋಗಾಲಯಗಳನ್ನು ಕೋವಿಡ್-೧೯ ಪರೀಕ್ಷೆಗಾಗಿ ಗುರುತಿಸಲಾಗಿದೆ.

Please follow and like us:

Related posts

Leave a Comment