ಕೊರೊನಾ ಆರ್ಭಟದ ನಡುವೆಯೇ ನಿಖಿಲ್ ಮದುವೆ..

ಬೆಂಗಳೂರು: ಕರ್ನಾಟಕ ರಾಜ್ಯದ ಮಾಜಿ ಸಿಎಂ ಕುಮಾರಸ್ವಾಮಿ- ಅನಿತಾ ದಂಪತಿಯ ಮಗ ನಿಖಿಲ್ ಮತ್ತು ರೇವತಿ ಮದುವೆ ಮೊದಲೇ ನಿಗದಿಯಾಗಿರುವಂತೆ ಏ. ೧೭ಕ್ಕೆ ನಡೆಯಲಿದೆ.
ಈ ಸಂಬAಧ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ ಅವರು,ಕೊರೋನಾ ಭೀತಿ ಕಡಿಮೆಯಾದ ಬಳಿಕ ರಾಮನಗರದಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಮಾಡಲಾಗುವುದು ಅಂತ ಮಾಹಿತಿ ನೀಡಿದ್ದಾರೆ.
ಇನ್ನು ಈ ಮದುವೆಯಲ್ಲಿ ಕೇವಲ ಎರಡೂ ಕುಟುಂಬಗಳ ಆಪ್ತ ಸಂಬAಧಿಕರು ಮಾತ್ರ ಭಾಗವಹಿಸಲಿದ್ದಾರೆ.ಕೊರೋನಾ ವೈರಸ್ ಅಬ್ಬರ ಇನ್ನೂ ಕಡಿಮೆಯಾಗದಿರುವುದರಿಂದ ಕಲ್ಯಾಣ ಮಂಟಪದ ಬದಲು ಮನೆಯಲ್ಲಿಯೇ ಸರಳವಾಗಿ ಮದುವೆ ಮಾಡಲಾಗುತ್ತದೆ.
ನಿಖಿಲ್ ಕುಮಾರಸ್ವಾಮಿ ಅಥವಾ ರೇವತಿ ಅವರ ಮನೆಯಲ್ಲಿ ಮದುವೆ ಮಾಡಲಾಗುತ್ತದೆ. ಯಾರ ಮನೆಯಲ್ಲಿ ಮಾಡಬೇಕೆಂಬುದರ ಬಗ್ಗೆ ಇನ್ನೂ ದೇವೇಗೌಡರ ಕುಟುಂಬ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
ಇದುವರೆಗೂ ಕುಮಾರಸ್ವಾಮಿಯವರ ಮನೆಯಲ್ಲಿ ಮದುವೆ ಕಾರ್ಯ ನಡೆಯದ ಕಾರಣ ನಿಖಿಲ್ ಮನೆಯಲ್ಲೇ ಮದುವೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

Please follow and like us:

Related posts

Leave a Comment