ನಿರಾಶ್ರಿತರ ತಾಣದಲ್ಲಿ ಊಟ ಮಾಡಿದ ಸಚಿವ ಅಶೋಕ್ ಪುತ್ರ..

ಯಲಹಂಕ(ಬೆ0ಗಳೂರು): ಕೊವಿಡ್ ೧೯ ಸೋಂಕನ್ನು ನಿಯಂತ್ರಿಸಲು,ದೇಶಾದ್ಯAತ ಏನು ೨೧ ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಕರೆ ನೀಡಿದ್ದಾರೆ. ಆದರೆ ಎಲ್ಲಾ ಜನತೆಯು ಕೆಲಸ ಕಾರ್ಯಗಳು ಇಲ್ಲದೆ ಮನೆಯಲ್ಲಿಯೇ ಇದ್ದಾರೆ ಇದರ ನಡುವೆ ಎಷ್ಟೋ ಜನತೆಗೆ ಒಪ್ಪತ್ತಿನ ಊಟಕ್ಕೂ ತೊಂದರೆಯಾಗಿ ಪರಿಣಮಿಸಿದೆ.
ನಿರಾಶ್ರಿತರ ತಾಣಗಳಲ್ಲಿ ಊಟ ನೀಡಲು ಬಂದವರಿಗೆ ಅವರ ಸಮಸ್ಯೆಗಳೊಂದಿಗೆ ತಮ್ಮ ಅಳಲನ್ನು ತೊಡಿಕೊಂಡರು.
ಅಲ್ಲದೆ,ನಮಗೆ ಊಟ ನೀಡಿ ಹಸಿವನ್ನು ನೀಗಿಸುತ್ತಿದ್ದೀರಾ, ನಮಗೆ, ಖರ್ಚು ವೆಚ್ಚಕ್ಕೆ ರೊಕ್ಕ ಇಲ್ಲ,ನಮಗೆ ಸಣ್ಣಪುಟ್ಟ ಮಕ್ಕಳಿದ್ದು,ಅವರಿಗೆ ತಿಂಡಿ ,ಸಾಬೂನು, ಎಣ್ಣೆ,ತರಕಾರಿ, ಎನೂ ಇಲ್ಲದಂತಾಗಿದ್ದು,ಮಕ್ಕಳನ್ನು ಮನೆಯಲ್ಲಿ ಸುಧಾರಿಸಲು, ಕಷ್ಟ ವಾಗಿದೆ,ಆಹಾರ ಸಾಮಗ್ರಿಗಳನ್ನು, ಮತ್ತು ಔಷಧಿಗಳನ್ನು ನೀಡುವಂತೆ ಇಲ್ಲಿನ ನಿರಾಶ್ರಿತರು ಮನವಿ ಮಾಡಿದರು.
ಇನ್ನು ಕಂದಾಯ ಸಚಿವ ಆರ್.ಅಶೋಕ್ ಪುತ್ರ ಶರತ್ ಅಶೋಕ್‌ರ ಮಾನವೀಯತೆಯನ್ನು ಮೆಚ್ಚಲೆ ಬೇಕು.ಯಾಕಂದ್ರೆ ಯಲಹಂಕ ತಾಲ್ಲೂಕಿನ ಬ್ಯಾಟರಾಯನಪುರ,ವಿಧಾನಸಭಾಕ್ಷೇತ್ರದ ವ್ಯಾಪ್ತಿಯ ಹುಣಸ ಮಾರೇನಹಳ್ಳಿ, ರಜಾಕ್ ಪಾಳ್ಯಚಿಕ್ಕಜಾಲ, ಸೇರಿದಂತೆ ಇನ್ನೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಲಸೆ ನಿರಾಶ್ರಿತರಿಗೆ ತಾಣಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ.
ವಿಶೇಷವೆಂದರೆ ಅವರಿಗೆ ಊಟ ಕೊಡುವ ಮೊದಲು ನಿರಾಶ್ರಿತರ ತಾಣಗಳಲ್ಲಿ ಶರತ್ ಅಶೋಕ್ ಊಟ ಸೇವಿಸಿದ ನಂತರ ಫಲಾನುಭವಿಗಳಿಗೆ ಆಹಾರ ವನ್ನು ನೀಡುತ್ತಿರುವುದು ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ ಶರತ್ ಅಶೋಕ್,ಸತತ ೯ದಿನಗಳಿಂದ ಸುಮಾರು ೨೦೦೦ಕ್ಕೂ ಹೆಚ್ಚು ಜನತೆಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ, ಇವರೆಲ್ಲರೂ ದಿನ ಕೂಲಿಗಳು ಹಾಗೂ ವಲಸೆ ಕೂಲಿ ಕಾರ್ಮಿಕರು,ಇವರೆಲ್ಲರೂ, ಕೆಲಸಕ್ಕೆ ಬಂದವರಾಗಿದ್ದು,
ಲಾಕ್‌ಡೌನ್‌ನಿAದಾಗಿ ಇಂತಹವರಿಗೆ ಊಟದ ಸಮಸ್ಯೆ ಇದ್ದು ಅದನ್ನು ಹಸಿವನ್ನು ನೀಗಿಸುತ್ತಿದ್ದೇವೆ.ಜೊತೆಗೆ ಆರೋಗ್ಯ ಸರಿ ಇಲ್ಲದ ಜನರನ್ನು ಗುರ್ತಿಸಿ ಅವರಿಗೆ ಬೇಕಾಗಿರುವಂತಹ ಔಷಧಿಗಳನ್ನು ಸಹ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಇನ್ನು ಶರತ್ ಅಶೋಕ್‌ರ ಬೆಂಬಲಕ್ಕೆ ಸ್ಥಳೀಯ ಮುಖಂಡರಾದ,ನವೀನ್,ಡಿಆರ್‌ಎಸ್ ಮುನಿಯಪ್ಪ,ನರೇಶ್, ಶಿವಕುಮಾರ್,ಪವನ್ ಸರಿದಂತೆ ಅನೇಕರು ನಿಂತಿದ್ದಾರೆ.

ಶಿವಕುಮಾರ್ ಚಿಕ್ಕಜಾಲ ಎಕ್ಸ್ ಪ್ರೆಸ್ ಟಿವಿ ಯಲಹಂಕ(ಬೆ0ಗಳೂರು)

Please follow and like us:

Related posts

Leave a Comment