ಬಡವರ ಮೇಲೆ ಈ ಸರ್ಕಾರಕ್ಕೆ ಕರುಣೇ ಇಲ್ವೇ..?

ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ನಿಂದ ದೇಶಾದ್ಯಂತ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಬೆಂಗಳೂರಿAದ ಕಾಲ್ನಡಿಗೆಯಲ್ಲಿ ಬಂದ ಮಹಿಳೆಯೋರ್ವಳು ಸಾವನ್ನಪ್ಪಿರೋದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಿಂಧನೂರಿನ ವೆಂಕಟೇಶ್ವರ ನಗರದ ನಿವಾಸಿ ಗಂಗಮ್ಮ ಮೃತ ಮಹಿಳೆ ಅಂತ ಗುರುತಿಸಲಾಗಿದೆ.
ಸದ್ಯ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಮಾರ್ಚ್ ೩೦ರಂದು ಬೆಂಗಳೂರಿನಿAದ ಗುಳೆ ಹೊರಟಿದ್ದರು.ಇನ್ನೇನು ಸಿಂಧನೂರಿನವರೆಗೆ ಕಾಲ್ನಡಿಗೆಯಲ್ಲೇ ತೆರಳಬೇಕು ಎನ್ನುವಷ್ಟರಲ್ಲಿ ಗಂಗಮ್ಮ ದಾರಿಯುದ್ದಕ್ಕೂ ಅನ್ನ, ನೀರಿಲ್ಲದೇ ತೀವ್ರ ಅಸ್ವಸ್ಥಳಾಗಿದ್ದಳು. ಆಕೆಯನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಅಂತ ತಿಳಿದು ಬಂದಿದೆ.
ಆದರೆ ಗಂಗಮ್ಮನಿಗೆ ಒಂದೂವರೆ ವರ್ಷದ ಮಗುವಿದೆ. ಸಮಯಕ್ಕೆ ಊಟ ಸಿಗದ ಕಾರಣ ರಕ್ತ ಕಡಿಮೆಯಾಗಿ, ಕಿಡ್ನಿ ಸಮಸ್ಯೆಯಿಂದ ಬಳಲಿ ಸಾವನ್ನಪ್ಪಿದ್ದಾಳೆ ಎಂದು ವಿಮ್ಸ್ ಆಸ್ಪತ್ರೆ ಸ್ಪಷ್ಟಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್,ಮೃತ ಗಂಗಮ್ಮನಿಗೆ ಆಹಾರ ಇತ್ಯಾದಿಗಳನ್ನು ನೀಡಲಾಗಿಲ್ಲ ಎಂದು ಕೆಲವು ತಪ್ಪು ಮಾಹಿತಿ ನೀಡಲಾಗುತ್ತಿದೆ ಅಂತ ಹೇಳಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬಳ್ಳಾರಿ

Please follow and like us:

Related posts

Leave a Comment