ಸರಳವಾಗಿ ನಡೆದ ಬೆಂಗಳೂರು ಕರಗ..

ಬೆಂಗಳೂರು: ಪ್ರತಿವರ್ಷ ವಿಜೃಂಭಣೆಯಿAದ ನಡೆಯುತ್ತಿದ್ದ ಬೆಂಗಳೂರು ಕರಗ ಮಹೋತ್ಸವವನ್ನು ಈ ಬಾರಿ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
ಕಳೆದ ರಾತ್ರಿ ಬೆಂಗಳೂರಿನ ಧರ್ಮರಾಯ ದೇವಸ್ಥಾನದಲ್ಲಿ ಹಸಿ ಕರಗ ಆಚರಣೆ ಸಾಂಪ್ರಾದಾಯಿಕವಾಗಿ ಮತ್ತು ಸರಳವಾಗಿ ನಡೆಯಿತು. ಸದ್ಯ ಐತಿಹಾಸಿಕ ಹೂವಿನ ಕರಗ ಶಕ್ತ್ಯೋತ್ಸವ ನಡೆಯಲಿದೆ.
ಹಸಿಕರಗ ಆಚರಣೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರು, ಕರಗದ ಪೂಜಾರಿ, ನಾಲ್ಕು ಜನ ವೀರಕುಮಾರರು ಮಾತ್ರ ಭಾಗಿಯಾಗಿದ್ದರು. ದೇವಸ್ಥಾನದ ಪ್ರಾಂಗಣದಲ್ಲೆ ಪ್ರದಕ್ಷಿಣೆ ಹಾಕಿ ಪೂಜೆ ನೇರವೇರಿಸಿದರು. ಹಸಿಕರಗ ಆಚರಣೆಯಲ್ಲೂ ಕರಗ ಪೂಜಾರಿ ಮತ್ತು ವೀರಕುಮಾರರು ಸಾಮಾಜಿಕ ಅಂತರ ಕಾಯ್ದುಕೊಂಡರು.ಕರಗ ಮಹೋತ್ಸವಕ್ಕೂ ಎರಡು ದಿನ ಹಿಂದೆ ಹಸಿ ಕರಗ ನಡೆಯುತ್ತದೆ.
ಇನ್ನು ದೇವಾಲಯದ ಆಡಳಿತ ಮಂಡಳಿ ರಾತ್ರಿ ಹಸಿಕರಗ ಮುಗಿಸಿ ದೇವಸ್ಥಾನಕ್ಕೆ ಬೀಗ ಹಾಕಿದೆ. ಹೆಚ್ಚು ಜನ ಸೇರಿದಂತೆ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment