ಬುಲೆಟ್ ಕೊನೆಗಾಲದ ಬಗ್ಗೆ ಕಿಚ್ಚ ಏನ್ ಅಂದ್ರು..?

ಬೆ0ಗಳೂರು: ಹಾಸ್ಯ ನಟ ಬುಲೆಟ್ ಪ್ರಕಾಶ್ ನಿನ್ನೆ ನಿಧನರಾಗಿದ್ದಾರೆ.ಆದರೆ ಅವರ ಅಂತಿಮ ದರ್ಶನ ಪಡೆಯಲು ಹೆಚ್ಚು ಜನರಿಗೆ ಅವಕಾಶವಿಲ್ಲ.
ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ದರ್ಶನ್, ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಜಗ್ಗೇಶ್, ದುನಿಯಾ ವಿಜಯ್, ನೆನಪಿರಲಿ ಪ್ರೇಮ್ ಸೇರಿದಂತೆ ಎಲ್ಲರೂ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಕಿಚ್ಚ ಸುದೀಪ್ ಕೊನೆಗಾಲದಲ್ಲಿ ನಾವು ಚಿತ್ರರಂಗದ ಸ್ನೇಹಿತರು ಯಾರಿಗೂ ಅವರ ಮುಖ ದರ್ಶನ ಮಾಡಲು ಸಾಧ್ಯವಿಲ್ಲ ಎನ್ನುವುದೇ ನನಗೆ ಅತೀವ ಬೇಸರ ತಂದಿದೆ ಎಂದಿದ್ದಾರೆ. ಕೊರೋನಾದಿಂದಾಗಿ ೨೦ ಕ್ಕಿಂತ ಹೆಚ್ಚು ಜನರಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲೂ ಅವಕಾಶವಿಲ್ಲ. ಇದು ನನಗೆ ಎಲ್ಲಕ್ಕಿಂತ ಹೆಚ್ಚು ಬೇಸರ ತಂದಿದೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment