ನಿಮ್ಮ ಜಿಲ್ಲೆ

ನೀವೇ ಅದರ ಕ್ರೆಡಿಟ್ ಪಡೆದುಕೊಳ್ಳಿ ನಮಗೆ ಬೇಸರವಿಲ್ಲ..

Published

on

ಬೆಂಗಳೂರು: ಆರ್‌ಡಿಪಿಆರ್ ಏನ್ಮಾಡ್ತಿದೆ ಗೊತ್ತಿಲ್ಲ. ಬೇಸಿಗೆಯಿಂದಾಗಿ ಗ್ರಾಮೀಣಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಹೀಗಾಗಿ ಅಗತ್ಯವಿರುವ ಕಡೆ ಬೋರ್ ವೆಲ್ ಕೊರೆಸಬೇಕು. ಜನರಿಗೆ ಕುಡಿಯುವ ನೀರನ್ನ ಒದಗಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆ ನೀಡಿದ್ದಾರೆ
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ನಮ್ಮ ಕನಕಪುರದಲ್ಲಿ ೪೦-೫೦ ಸಾವಿರ ವೈಯುಕ್ತಿಕ ಅನುದಾನ ಕೊಟ್ಟಿದ್ದೇವೆ. ಚೆಕ್ ಡ್ಯಾಂ ನಿರ್ಮಿಸಿ ಅಂತರ್ಜಲ ಹೆಚ್ಚಿಸಿದ್ದೇವೆ. ಇದೇ ರೀತಿ ರಾಜ್ಯದಲ್ಲಿ ಸರ್ಕಾರ ಅನುಷ್ಠಾನಕ್ಕೆ ತರಬೇಕು. ನರೇಗಾ ಯೋಜನೆಯನ್ನ ಮುಂದುವರಿಸಬೇಕು. ಆಂದೋಲನದ ಮಾದರಿಯಲ್ಲಿ ಕೆಲಸ ಕಾರ್ಯ ನಡೆಯಬೇಕು. ಆರ್‌ಡಿಪಿಆರ್ ಇಲಾಖೆಗೆ ಚುರುಕು ಮುಟ್ಟಿಸಿ. ಕೃಷಿ ಜಾಬ್ ಕಾರ್ಡ್ ಇಲ್ಲ ಅವರಿಗೆ ಕಾರ್ಡ್ ಕೊಡಿ. ವಲಸೆ ಕಾರ್ಮಿಕರಿಗೆ ಒಂದೆರಡು ತಿಂಗಳು ಕೆಲಸ ಕೊಡಿ. ನನಗೆ ಭಯಕಾಡೋಕೆ ಪ್ರಾರಂಭಿಸಿದೆ. ನೀವು ಉದ್ಯೋಗ ಕೊಡದಿದ್ದರೆ ಕಷ್ಟವಾಗಬಹುದು. ಕಳ್ಳತನ, ದರೋಡೆಯಂತಹ ಕೃತ್ಯಗಳಿಗೆ ಅವಕಾಶವಾಗಬಹುದು. ಅದಕ್ಕೆ ಐದೈದು ಮಂದಿಯAತೆ ಕೂಲಿ ಕೆಲಸ ಮಾಡಿಕೊಡಿ. ಪ್ರಧಾನಿ ಈ ರೀತಿ ಕೆಲಸ ಮಾಡ್ತೇವೆ ಅಂತ ಪಟ್ಟಿ ಕೊಟ್ಟಿದ್ದಾರೆ. ಆ ಪಟ್ಟಿಯಂತೆ ಕೆಲಸ ಮಾಡಿ. ನೀವೇ ಅದರ ಕ್ರೆಡಿಟ್ ಪಡೆದುಕೊಳ್ಳಿ ನಮಗೆ ಬೇಸರವಿಲ್ಲ ಎಂದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version