ಮಂಡ್ಯ : ಮೂರು ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಶರುವಾಗಿದ್ದು, ಮಳವಳ್ಳಿ, ನಾಗಮಂಗಲದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಸದ್ಯ ಇದರ ಬಗ್ಗೆ ಮಾಹಿತಿ ನೀಡಿರುವ ಮಂಡ್ಯ ಡಿಸಿ ಡಾ.ಎಂ.ವಿ. ವೆಂಕಟೇಶ್,ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಏಳು ಮಂದಿ ಪೈಕಿ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಮೂವರು ಸೋಂಕಿತ ವ್ಯಕ್ತಿಗಳು ೩೨, ೩೬ ಹಾಗೂ ೬೫ ವರ್ಷದವರಾಗಿದ್ದು, ಉಳಿದ ಇಬ್ಬರಿಗೆ ನೆಗೆಟಿವ್ ಬಂದಿದೆ.
ಇನ್ನು ಇಬ್ಬರ ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ಪುನರ್ ಪರಿಶೀಲನೆಗಾಗಿ ಮತ್ತೊಮ್ಮೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಾಗಮಂಗಲದ ಐದು ಪ್ರಕರಣಗಳು ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ನಾಗಮಂಗಲ ಮಳವಳ್ಳಿಯಲ್ಲಿ ಹೈ ಅಲರ್ಟ್

Please follow and like us: