ಮಂಡ್ಯದಲ್ಲಿ 4ನೇ ಕೇಸ್ ,ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 181ಕ್ಕೇರಿಕೆ..!

ಮಂಡ್ಯ/ಬೆ0ಗಳೂರು: ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ. ಇವತ್ತು ಮಧ್ಯಾಹ್ನದ ವೇಳೆಯೊಳಗೆ ೬ ಸೋಂಕಿತರು ಪತ್ತೆಯಾಗಿದ್ದಾರೆ. ಉತ್ತರ ಕನ್ನಡ ೧, ಕಲಬುರಗಿ ೨, ಮಂಡ್ಯ ೧ ಚಿಕ್ಕಬಳ್ಳಾಪುರ ೧, ಬೆಂಗಳೂರಿನಲ್ಲಿ ೧ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ರಾಜ್ಯದಲ್ಲಿ ೧೮೧ ಪ್ರಕರಣಕ್ಕೆ ಏರಿಕೆಯಾಗಿವೆ.
ಇನ್ನು ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆನ ೪ಕ್ಕೆ ಏರಿಕೆ ಕಂಡಿದೆ. ನಿಜಾಮುದ್ದೀನ್ ಧರ್ಮಗುರುಗಳ ಜೊತೆ ಸಂಪರ್ಕ ಹೊಂದಿದ್ದ ೩೫ ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಈತನಿಗೆ ೧೭೯ನೇ ನಂಬರ್ ನೀಡಲಾಗಿದೆ. ಈತ ೧೩೪ ಮತ್ತು ೧೩೮ನೇ ರೋಗಿಯ ಜೊತೆ ಸಂಪರ್ಕ ಹೊಂದಿದ್ದಾಗಿ ತಿಳಿದು ಬಂದಿದೆ. ಹೀಗಾಗಿ ಈತನನ್ನು ಜಿಲ್ಲಾಡಳಿತದ ವತಿಯಿಂದ ಐಸೊಲೇಷನ್ ವಾರ್ಡ್ನಲ್ಲಿರಿಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಇಂದು ಈತನ ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಇರುವುದು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ೪ ಮಂದಿಗೆ ಕೊರೊನಾ ಪತ್ತೆಯಾಗಿದೆ. ಎಲ್ಲರೂ ಕೂಡ ಮಳವಳ್ಳಿ ಪಟ್ಟಣದ ನಿವಾಸಿಗಳಾಗಿದ್ದಾರೆ. ಯಾರೂ ಮೂಲತಃ ಮಂಡ್ಯ ಜಿಲ್ಲೆಯವರಲ್ಲ. ಸದ್ಯ ಮಳವಳ್ಳಿಯಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾಗಿದೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment