ಅಮ್ಮ-ಮಗಳ ಕಣ್ಣೀರಿಗೆ ಕರಗಿದ ಸಿಎಂ ಸಾಹೇಬ್ರು..

ಬೆಳಗಾವಿ/ಬೆಂಗಳೂರು:ಬೆಳಗಾವಿ ನರ್ಸ್ ಮತ್ತು ಮಗುವಿನ ಕಣ್ಣೀರಿಗೆ ಸಿಎಂ ಯಡಿಯೂರಪ್ಪ ಕರಗಿದ್ದು, ನಿಮ್ಮ ಜೊತೆ ನಾವೀದ್ದೇವೆ ಅಂತ ಧೈರ್ಯ ಕೂಡ ತುಂಬಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಂದ ಹಾಗೇ ಮಗುವನ್ನು ನೋಡದೆ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಿ. ಇನ್ನು ಸ್ವಲ್ಪ ದಿನ ಸಹಕಾರ ನೀಡಿ. ನಿಮಗೆ ಮುಂದೆ ಒಳ್ಳೆಯ ಅವಕಾಶ ಸಿಗಲಿದೆ. ನಾನು ನಿಮ್ಮನ್ನು ಗಮನಿಸುತ್ತೇನೆ ಎನ್ನುವ ಮೂಲಕ ಭವಿಷ್ಯದಲ್ಲಿ ಉತ್ತಮ ಅವಕಾಶದ ಭರವಸೆ ನೀಡಿದರು.ನಿಮ್ಮ ಕಾರ್ಯಕ್ಕೆ ದೇವರು ಒಳ್ಳೆಯದ ಮಾಡಲಿ ನಿಮ್ಮ ಶ್ರಮಕ್ಕೂ ಒಳ್ಳೆಯದಾಗಲಿದೆ ಎಂದು ತುಂಬು ಹೃದಯದ ಅಭಿನಂದನೆ ಸಲ್ಲಿಸಿದರು.
ಅಂದ ಹಾಗೇ ಬೆಳಗಾವಿ ಭೀಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡಿನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಸುನಂದಾ ಮನೆಗೆ ಹೋಗದೇ ೧೫ ದಿನ ಆಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಆಸ್ಪತ್ರೆಗೆ ಬಂದಿದ್ದ ಅವರ ಮೂರು ವರ್ಷದ ಮಗಳು ಐಶ್ವರ್ಯ ಆಸ್ಪತ್ರೆಯೇ ಮುಂದೆಯೇ ಅಮ್ಮ ಬೇಕು ಎಂದು ಕಣ್ಣೀರು ಹಾಕಿದ್ದಳು. ಮಗಳು ಮತ್ತು ಅಮ್ಮನ ಕಣ್ಣೀರಿನ ದೃಶ್ಯವನ್ನು ನೋಡಿ ಜನರ ಕಣ್ಣಿಂಚಿನಲ್ಲಿ ನೀರು ತರಿಸಿತ್ತು.

Please follow and like us:

Related posts

Leave a Comment