ರಾಜ್ಯ ಸರ್ಕಾರದಿಂದ ಪೊಲೀಸರಿಗೆ ವಿಶೇಷ ಅಧಿಕಾರ

ಮಳವಳ್ಳಿ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರಿಗೆ ೨೦೧೫ರ ಕಾಯ್ದೆ ಪ್ರಕಾರ ವಿಶೇಷ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಪಟ್ಟಣದ ಈದ್ಗಾ ಮಲ್ಲಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಡಿವೈಎಸ್ಪಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು,ವೆಂಟಿಲೇಟರ್ ಹಾಕುವ ಹಂತಕ್ಕೆ ರಾಜ್ಯದಲ್ಲಿ ಯಾವ ರೋಗಿಯೂ ಇಲ್ಲ,ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೇಶದ ಲಾಕ್ ಡೌನ್ ಘೋಷಿಸುವ ಮೊದಲೇ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದರು ಎಂದರು.
ಜಿಲ್ಲೆಯಲ್ಲಿ ನಿನ್ನೆಯವರೆಗೂ ಒಂದು ಯಾವುದೇ ಕೊರೊನಾ ಕೇಸ್ ಇರಲಿಲ್ಲ.ಆದರೆ ನಿನ್ನೆ ಸಂಜೆ ೩ ಹಾಗೂ ಇಂದು ೧ ಒಟ್ಟು ನಾಲ್ಕು ಪಾಸಿಟಿವ್ ಆಗಿದೆ.ಇದರಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು,ಪ್ರಮುಖವಾಗಿ ಸೋಂಕು ಹರಡುವುದನ್ನು ತಡೆಗಟ್ಟಲು ಪೊಲೀಸರಿಗೆ ವಿಶೇಷ ಅಧಿಕಾರ ನೀಡಲಾಗಿದೆ.ಜೊತೆಗೆ ಕಾನೂನು ಉಲ್ಲಂಘಿಸುವ ಯಾರನ್ನಾದರೂ ಬಂಧಿಸುವ ವಿಶೇಷ ಅಧಿಕಾರವನ್ನು ಪೊಲೀಸ್ ಇಲಾಖೆಗೆ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವೆಂಕಟೇಶ್,ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್,ಸಿಆರ್‌ಓ ಯಾಲಕ್ಕಿಗೌಡ,ಶಾಸಕ
ಡಾ.ಕೆ.ಅನ್ನದಾನಿ,ಮಂಡ್ಯ ಉಪವಿಭಾಗ ಅಧಿಕಾರಿ ಸೂರಜ್,ತಹಸೀಲ್ದಾರ್ ಚಂದ್ರಮೌಳಿ,ನೋಡಲ್ ಅಧಿಕಾರಿ ಬಿ.ಪಿನ್.ಬೋಪಣ್ಣ,
ಡಿವೈಎಸ್ಪಿ ಪೃಥ್ವಿ, ಸಿಪಿಐ ಧರ್ಮೇಂದ್ರ, ಪಿಐ ರಮೇಶ್ ಇತರರು ಹಾಜರಿದ್ದರು.

ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Please follow and like us:

Related posts

Leave a Comment