ಕೆರೆಗೆ ಬಿದ್ದು ಮೂವರು ಮಕ್ಕಳ ಸಾವು

ಸಿಂಧನೂರು : ಕುಡಿಯಲು ನೀರು ತರಲು ಹೋದ ಮೂವರು ಮಕ್ಕಳು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರಾವುಡಕುಂದ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ರಾವುಡಕುಂದ ಗ್ರಾಮದ ವೀರೇಶ್ ಗದುಗಿನವರ್ ಮಕ್ಕಳಾದ ನಾಗರಾಜ (೧೦), ರವಿ (೧೧) ಹಾಗೂ ಮಲ್ಲೇಶ ಬಳಗೇರಿ ಪುತ್ರ ಕಾರ್ತಿಕ್ (೬) ಹಾಗೂ ಮೃತ ದುರ್ದೈವಿಗಳು.
ಅಂದ ಹಾಗೇ ಬೆಳಿಗ್ಗೆ ೮ ಗಂಟೆ ಸುಮಾರಿಗೆ ರಾವುಡಕುಂದ ಗ್ರಾಮದಲ್ಲಿ ಮೂರು ಮಕ್ಕಳ ಊರಿನ ಪಕ್ಕದಲ್ಲಿರುವ ಕೆರೆಯಲ್ಲಿ ನೀರು ತರಲು ಹೋಗಿ, ಕಾಲುಜಾರಿ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ನೀರು ತರಲು ಹೋದ ಮಕ್ಕಳು ಸಾವಿಗೀಡಾದ ಘಟನೆಯಿಂದ ಮನೆಯಲ್ಲಿ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬAಧ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment