ಲಾಕ್‌ಡೌನ್ ಉಲ್ಲಂಘಿಸುವವರ ವಿರುದ್ಧ `ಡ್ರೋನ್’ ಕಣ್ಣು..

ಮೈಸೂರು: ಲಾಕ್‌ಡೌನ್ ಉಲ್ಲಂಘಿಸುವವರ ಹಾಗೂ ಜನರು ಗುಂಪುಗುAಪಾಗಿ ಸೇರುವುದನ್ನು ನಿಯಂತ್ರಿಸುವುದಕ್ಕಾಗಿ ಕೊನೆಗೂ ಸಾಂಸ್ಕೃತಿಕ ನಗರಿ ಮೈಸೂರು ಪೊಲೀಸರು ಹೊಸ ಐಡಿಯಾ ಮಾಡಿದ್ದಾರೆ.
ಹೌದು, ಜನವಸತಿ ಪ್ರದೇಶಗಳಲ್ಲಿ ಜನರು ಗುಂಪುಗುAಪಾಗಿ ಸೇರುವುದನ್ನು ತಡೆಯಲು ಡ್ರೋನ್ ಬಳಸಲಾಗುತ್ತಿದೆ.
ವಿಶೇಷವೆಂದರೆ, ಈ ಡ್ರೋನ್ ಕ್ಯಾಮರಾದೊಂದಿಗೆ ಧ್ವನಿವರ್ಧಕವೂ ಇದ್ದು, ಕಾರ್ಯನಿರ್ವಹಿಸುವಾಗ ಯಾರಾದರೂ ಗುಂಪುಗುAಪಾಗಿ ಓಡಾಡುತ್ತಿದ್ದರೆ ಅಂತಹವರಿಗೆ ಎಚ್ಚರಿಕೆ ನೀಡಲಾಗುತ್ತದೆ.
ಅಂದ ಹಾಗೇ ಲಾಕ್‌ಡೌನ್ ನಿಯಮ ಮೀರಿ ರಸ್ತೆಗಿಳಿಯುವ ಜನರಿಗೆ ಪೊಲೀಸರು ಲಾಠಿ ರುಚಿ ಸಹ ತೋರಿಸುತ್ತಿದ್ದು, ಆದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಮನೆಯಿಂದ ಸುಖಾಸುಮ್ಮನೆ ಹೊರ ಬರುವುದು, ಗುಂಪುಗುAಪಾಗಿ ಸೇರುವುದನ್ನು ಬಿಡುತ್ತಿಲ್ಲ. ಹೀಗಾಗಿಯೇ ಡ್ರೋನ್ ಕ್ಯಾಮರಾ ಬಳಕೆ ಮಾಡಲು ಮೈಸೂರು ಪೊಲೀಸರು ಮುಂದಾಗಿದ್ದಾರೆ.
ಸದ್ಯ ಮೈಸೂರಿನ ಉದಯಗಿರಿ ಮತ್ತು ನರಸಿಂಹರಾಜ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಡ್ರೋನ್ ಬಳಸಲಾಗುತ್ತಿದ್ದು, ಯಾರಾದರೂ ಗುಂಪುಗುAಪಾಗಿ ಓಡಾಡುತ್ತಿದ್ದರೆ ಅಂತಹವರಿಗೆ ಕ್ಯಾಮರಾದಲ್ಲಿ ಅಳವಡಿಸಿರುವ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಗುತ್ತದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಮೈಸೂರು

Please follow and like us:

Related posts

Leave a Comment