ಆಹಾರ ಇಲಾಖೆ ಅಧಿಕಾರಿಗೆ ಜಿ.ಪಂ ಅಧ್ಯಕ್ಷೆ ತರಾಟೆ..

ಅರಕಲಗೂಡು:ನಾಗರಿಕ ಆಹಾರ ಸರಬರಾಜು ಅಧಿಕಾರಿಗೆ ಹಾಸನ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ವೇತಾ ದೇವರಾಜ್ ತರಾಟೆಗೆ ತೆಗೆದುಕೊಂಡ ಘಟನೆ ಇಂದಿಲ್ಲಿ ನಡೆದಿದೆ.
ಇಲ್ಲಿನ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ಬಗ್ಗೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ವೇತಾ ದೇವರಾಜ್ ತಾಲ್ಲೂಕು ಅಧಿಕಾರಿಗಳ ಸಭೆ ನಡೆಸಿದ ವೇಳೆ, ಜಿಲ್ಲಾ ಪಂಚಾಯತಿ ಸದಸ್ಯರಾದ ರೇವಣ್ಣ, ಶ್ರೀನಿವಾಸ್,
ಅರಕಲಗೂಡು ತಾಲ್ಲೂಕಿನಲ್ಲಿ ನ್ಯಾಯ ಬೆಲೆ ಅಂಗಡಿಗಳು ಕಾರ್ಡ್ಗೆ ೧೦, ೨೦ ರೂ.ಗಳನ್ನು ಪಡೆಯುತ್ತಿದ್ದಾರೆ.ಜೊತೆಗೆ ೨ ರಿಂದ ೫ಕೆಜಿವರೆಗೆ ಕಡಿತ ಮಾಡಿ ಅಕ್ಕಿ ವಿತರಣೆ ವಿತರಣೆ ಮಾಡುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.
ತಕ್ಷಣ ಇದರಿಂದ ಸಿಟ್ಟಾದ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ವೇತಾ ದೇವರಾಜ್, ನಾಗರಿಕ ಆಹಾರ ಸರಬರಾಜು ಅಧಿಕಾರಿ ಮಂಜುನಾಥ್‌ಗೆ ತರಾಟೆಗೆ ತೆಗೆದುಕೊಂಡು ಕೂಡಲೇ ಅಂತಹ ಅಂಗಡಿಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
ಇದಲ್ಲದೆ, ಒಂದು ರೂಪಾಯಿಯನ್ನು ಸಹ ತೆಗೆದುಕೊಳ್ಳಬಾರದು.ಸರ್ಕಾರದಿಂದ ಉಚಿತ ಅಕ್ಕಿಯನ್ನು ವಿತರಣೆ ಮಾಡಬೇಕು. ಫಲಾನುಭವಿಗಳಿಗೆ ಕೂಡಲೇ ವಿತರಣೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇನ್ನು ಅಕ್ರಮವಾಗಿ ಮದ್ಯ ಮಾರಾಟಕ್ಕೆ ಹಾಗೂ ಇಸ್ಪೀಟ್ ಜೂಜಾಟಕ್ಕೆ ಕಡಿವಾಣ ಹಾಕಬೇಕು,ಇಲ್ಲದಿದ್ದರೆ ಜೂಜಾಟದವರು, ಮದ್ಯ ವ್ಯಸನಿಗಳು ಒಂದು ಕಡೆ ಸೇರಿ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ ಎಂದು ಆಂತಕ ವ್ಯಕ್ತಪಡಿಸಿದರು.
ಇದೇ ವೇಳೆ ಅವರು, ಗಡಿ ಪ್ರದೇಶಗಳನ್ನು ಬಂದ್ ಮಾಡಬೇಕು.ಹೊರಗಿನಿಂದ ಯಾರು ಬರದ ಹಾಗೆ ಮತ್ತು ಒಳಗಿನನಿಂದ ಹೊರ ಹೋಗದ ಹಾಗೆ ಕ್ರಮ ವಹಿಸಬೇಕು, ಆರೋಗ್ಯ ಇಲಾಖೆ ಯಿಂದ ಕರೋನಾ ದ ಬಗ್ಗೆ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಎ.ಎಸ್.ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು (ಹಾಸನ)

Please follow and like us:

Related posts

Leave a Comment