ಈ ಮನೆಯೊಳಗೆ ನುಗ್ಗಿ ಬಿಟ್ಟಿತ್ತು ಚಿರತೆ..!

ಮಳವಳ್ಳಿ: ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಮನೆಯೊಂದರಲ್ಲಿ ಚಿರತೆ ಪ್ರತ್ಯಕ್ಷ ವಾದ ಘಟನೆ ಮಳವಳ್ಳಿ ತಾಲ್ಲೂಕಿನ ಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಂದ ಹಾಗೇ ಮಂಚನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ರೇಷ್ಮೆ ಸಾಗಾಣಿಕೆಗೆ ಮಾಡಲು ಹೊಸದಾಗಿ ಮನೆ ಕಟ್ಟಿದ್ದರು.ಆದರೆ ಕಳೆದ ರಾತ್ರಿ ಆ ಮನೆಯಲ್ಲಿ ಚಿರತೆ ಕಾಣಿಸಿಕೊಂಡಿದೆ.
ಇನ್ನು ಚಿರತೆ ಮನೆಯೊಳಗೆ ಹೋಗುತ್ತಿದ್ದಂತೆ ಮನೆಯವರು ಹೊರಗಿನಿಂದ ಬಾಗಿಲು ಹಾಕಿ ಚಿರತೆಯನ್ನು ಬಂಧಿಸಿಟ್ಟಿದ್ದಾರೆ.
ಇದಾದ ಬಳಿಕ ವಿಷಯ ತಿಳಿದ ಅರಣ್ಯ ಅಧಿಕಾರಿ ಆಸಿಫ್ ಮತ್ತವರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ೨ ವರ್ಷ ವಯಸ್ಸಿನ ಚಿರತೆಯನ್ನು ಸೆರೆ ಹಿಡಿದು ತಮ್ಮ ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ ಚಿರತೆ ಪತ್ರಕ್ಷö್ಯಗೊಂಡ ಹಿನ್ನೆಲೆಯಲ್ಲಿ ಮಂಚನಹಳ್ಳಿಯ ಗ್ರಾಮದ ಜನರು ಭಯಭೀತಗೊಂಡಿದ್ದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ (ಮಂಡ್ಯ)

Please follow and like us:

Related posts

Leave a Comment