ಅರಕಲಗೂಡು ತಾಲ್ಲೂಕಿನ ಅಬ್ಬರಿಸಿದ ಮಳೆರಾಯ

ಅರಕಲಗೂಡು: ಒಂದು ಕಡೆ ಕೊರೊನಾ ಆರ್ಭಟಿಸುತ್ತಿದ್ರೆ,ಇನ್ನೊಂದು ಕಡೆ ಮಳೆರಾಯ ಅಬ್ಬರಿಸುತ್ತಿದ್ದಾನೆ.
ಅಂದ ಹಾಗೇ ಮೊದಲೇ ಬಿಸಿಲಿನಿಂದ ತತ್ತರಿಸಿದ ಹೋಗಿದ್ದ ಹಾಸನ ಜಿಲ್ಲೆಯ ಜನರಿಗೆ ವರುಣನ ಆಗಮನ ಸಂತಸ ತಂದಿದೆ.
ಸದ್ಯ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಮಳೆ ಬಂದ ಹಿನ್ನೆಲೆಯಲ್ಲಿ ರೈತರ ಮುಖದಲ್ಲಿ ಹರ್ಷ ಮೂಡಿದೆ.
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯ ಕೆಲವು ಕಡೆ ಹಳ್ಳಿಗಳಿಗೆ ಮಳೆ ಬಿದ್ದ ಪರಿಣಾಮ ಹಳ್ಳ ಗುಂಡಿಗಳು ತುಂಬಿ ಕೊಂಡಿವೆ.
ಅದರಲ್ಲೂ ಚೌರಗಲ್ ಗ್ರಾಮದಲ್ಲಿ ಆಲಿಕಲ್ಲು ಮಳೆ ಬಿದ್ದಿದ್ದು, ಇನ್ನೂ ಕೆಲವು ಭಾಗಗಳಲ್ಲಿ ಮಳೆ ಜೊತೆ ಗಾಳಿ ಬೀಸಿದ ಪರಿಣಾಮ ಬೆಳೆ ಹಾನಿಯಾಗಿದೆ.
ಚೌರಗಾಲ್ ಗ್ರಾಮದಲ್ಲಿ ಗಾಳಿ ಮಳೆಗೆ ರೈತ ತಿಮ್ಮಗೌಡರ ಜಮೀನಿನಲ್ಲಿ ಬೆಳೆದ ಜೋಳ,ಶುಂಠಿ,ರೇಷ್ಮೆ ಹಾಳಾಗಿದೆ.ಅಲ್ಲದೇ ಗಾಳಿ ಮಳೆ ಅಬ್ಬರಕ್ಕೆ ಮರಗಳು ನೆಲಕ್ಕುರುಳಿದೆ.
ಇನ್ನು ಕೊರೊನಾದಿಂದ ಬೆಳೆದ ಬೆಳೆಗೆ ಬೆಲೆ ಇಲ್ಲದೆ ಕಂಗಾಲಾಗಿರುವ ರೈತರು ಮಳೆಯಿಂದ ಆಗಿರುವ ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸಿಕೊಡಲು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಎ.ಎಸ್.ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು(ಹಾಸನ)

Please follow and like us:

Related posts

Leave a Comment