ಲಾಕ್‌ಡೌನ್ ನಡುವೆ ದೇವದುರ್ಗ ತಾಲೂಕಿನಲ್ಲಿ ನೀರಿಗಾಗಿ ಪರದಾಟ..

ದೇವದುರ್ಗ: ತಾಲೂಕಿನ ಅಮರಾಪೂರ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮುಕ್ಕನಾಳ ಗ್ರಾಮದಲ್ಲಿ ಕಳೆದ ೧೫ ದಿನಗಳಿಂದ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಕೊರೊನಾ ವೈರಸ್ ಭೀತಿಯಿಂದ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬಾರದಂತೆ ರಾಯಚೂರು ಜಿಲ್ಲಾಡಳಿತ ಕಟ್ಟುನಿಟ್ಟಾದ ಕ್ರಮ ತೆಗೆದುಕೊಂಡಿದೆ.
ಇAತಹ ಸಂದರ್ಭದಲ್ಲಿ ಜನಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿರುವಾಗ ಸ್ಥಳಿಯ ಆಡಳಿತ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.
ಈಗಾಗಲೇ ಜಿಲ್ಲಾಧಿಕಾರಿಗಳು ಕುಡಿಯುವ ನೀರಿನ ಅಭಾವ ಉಂಟಾಗದAತೆ ಮುಂಜಾಗ್ರತಾ ಕ್ರಮಕ್ಕಾಗಿ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಲಾಗಿದ್ದರೂ ಅಮರಾಪೂರ ಪಂಚಾಯತಿಯ ಆಡಳಿತ ಮಂಡಳಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ.
ಒಟ್ಟಾರೆ ಮೊದಲೇ ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ಜನರು ನಮಗೆ ಕುಡಿಯುವ ನೀರಿನ ತೀವ್ರ ತೊಂದರೆಯಾಗಿದೆ ಎಂದು ಈ ಗ್ರಾಮ ಪಂಚಾಯತಿ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ.

ಸುರೇಶ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Please follow and like us:

Related posts

Leave a Comment