ಬಾಗಲಕೋಟೆ ಜಿಲ್ಲೆಯಲ್ಲಿ ಹಾಲು ವಿತರಣೆಯಲ್ಲಿ ಭಾರೀ ಗೋಲ್‌ಮಾಲ್

ಬಾಗಲಕೋಟೆ: ದೇಶ್ಯಾದಂತ ಮೇ.೩ವರೆಗೆ ಲಾಕ್‌ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದು ವಾರ ಉಚಿತ ಹಾಲು ವಿತರಣೆಯನ್ನು ವಿಸ್ತರಣೆ ಮಾಡಲಾಗಿದೆ.ಆದರೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಪಟ್ಟಣದಲ್ಲಿ ಮಾತ್ರ ಉಚಿತ ಹಾಲು ದುರ್ಬಳಿಕೆಯಾಗುತ್ತಿದೆ ಆರೋಪ ಕೇಳಿ ಬಂದಿದೆ.
ಅAದ ಹಾಗೇ ರಬಕವಿ ಬನಹಟ್ಟಿ ಪಟ್ಟಣದಲ್ಲಿ ೧೨ನೇ ವಾರ್ಡ್ ನಿವಾಸಿಗಳು,ಇದೇ ವಿಷಯವಾಗಿ ಹಾಲು ವಿತರಕರಿಗೆ ತರಾಟೆಗೆ ತೆಗೆದುಕೊಂಡಿದ್ದರೆ. ಅಲ್ಲದೆ, ಹತ್ತು ದಿನಗಳು ಕಳೆದ್ರು ವಾರ್ಡ ನಂಬರ್ ೧೨ರಲ್ಲಿ ಉಚಿತ ಹಾಲು ವಿತರಣೆಯಾಗಿಲ್ಲ. ಹತ್ತು ದಿನದ ಹಿಂದೆ ಒಂದು ಬಾರಿ ಉಚಿತ ಹಾಲು ನೀಡಿ ಹೋದ ಮೇಲೆ ಹಾಲು ವಿತರಕರು ಮತ್ತೆ ವಾಪಸ್ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಹತ್ತು ದಿನದ ನಂತರ ಇಂದು ವಾರ್ಡ್ಗೆ ಹಾಲು ವಿತರಕರು ಹಾಗೂ ನಗರಸಭೆ ಸದಸ್ಯೆ ಶಶಿಕಲಾ ಸಾರವಾಡ ಬಂದಾಗ ಇಲ್ಲಿನ ನಿವಾಸಿಗಳು ಸರಿಯಾಗಿ ತರಾಟೆ ತೆಗೆದುಕೊಂಡಿದ್ದಾರೆ.ಜೊತೆಗೆ ನಿಮಗೆ ಬೇಕಾದವರಿಗೆ ಮಾತ್ರ ಹಾಲು ವಿತರಿಸುತ್ತಿದ್ದೀರಾ ಎಂದು ನಗರಸಭೆ ಸದಸ್ಯೆ ಶಶಿಕಲಾ ವಿರುದ್ಧ ಆರೋಪ ಮಾಡಿದ್ದಾರೆ.
ಒಟ್ಟಿನಲ್ಲಿ ನಿರ್ಗತಿಕರಿಗೆ ಉಚಿತ ಹಾಲು ನೀಡಿದ ನಗರಸಭೆ ಹಾಲು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ರಾಜ್ಯ ಸರ್ಕಾರಕ್ಕಾಗಲಿ, ಬಾಗಲಕೋಟೆ ಜಿಲ್ಲಾಡಳಿತಕ್ಕಾಗಲಿ ಇನ್ನೂ ಗಮನಕ್ಕೆ ಬರದಿರೋದು ನಿಜಕ್ಕೂ ವಿಪರ್ಯಾಸ..

ಶ್ಯಾಮ್ ತಳವಾರ್ ಎಕ್ಸ್ಪ್ರೆಸ್ ಟಿವಿ ಜಮಖಂಡಿ(ಬಾಗಲಕೋಟೆ)

Please follow and like us:

Related posts

Leave a Comment