ಇಂಡಿ ತಾಲೂಕಿನಲ್ಲಿ ಭಯದ ವಾತಾವರಣ..

ಇಂಡಿ : ವಿಶ್ವದಲ್ಲೇ ಭಯ ಹುಟ್ಟಿಸಿ ಕಿಲ್ಲರ್ ಕೊರೊನಾ ರಾಜ್ಯದಲ್ಲಿ ತನ್ನ ಅಬ್ಬರ ಮುಂದುವರೆಸಿದೆ.
ಸದ್ಯ ಇದರ ನಡುವೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣ ಮತ್ತು ತಾಲೂಕಿನಲ್ಲಿ ಭಯದ ವಾತಾವರಣ ನಿರ್ಮಿಸುವಂತಹ ಘಟನೆಗಳು ಜರುಗುತ್ತಿವೆ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಆಂತಕ ವ್ಯಕ್ತಪಡಿಸಿ ಈ ಸಂಬAಧ ಇಂಡಿ ತಾಲ್ಲೂಕಿನ ಉಪ ವಿಭಾಗಧಿಕಾರಿಗೆ ಮನವಿ ಸಲ್ಲಿಸಿದೆ.
ಇನ್ನು ಸುದ್ದಿಗಾರರೊಂದಿಗೆ ಮಾತಾನಾಡಿದ ವಿಶ್ವ ಹಿಂದೂ ಪರಿಷತ್‌ನ ಇಂಡಿ ಘಟಕದ ಕಾರ್ಯಾಧ್ಯಕ್ಷ ಪ್ರಕಾಶ ಬಿರಾದಾರ, ಇಂಡಿ ಪಟ್ಟಣದ ಶ್ರೀ ಸಾಯಿ ಸಂತೋಷ ಅಸ್ಪತ್ರೆಯಲ್ಲಿ ಮೂರು ಮಂದಿ ಯುವಕರು ಅನುಮಾನಸ್ಪದವಾಗಿ ತಿರುಗಾಡಿ ಅದೇ ಆಸ್ಪತ್ರೆಯಲ್ಲಿ ಉಗಳಿರುವ ಘಟನೆ ನಡೆದಿದೆ.
ಜೊತೆಗೆ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದ ಲಿಂಬೆ ತೊಟದಲ್ಲಿ ೧೨ ಮಂದಿ ಅಕ್ರಮವಾಗಿ ವಾಸ ಮಾಡಿದ್ದು,ಅವರನ್ನು ತಾಲೂಕು ಆಡಳಿತ ವಶಕ್ಕೆ ಪಡೆಯಲಾಗಿದೆ.ಹೀಗಾಗಿ ಯಾರೂ ಶಾಂತಿ ದಕ್ಕೆ ತರುತ್ತಾರೋ,ಸೌಹಾರ್ದ ತೆಗೆ ಸಮಸ್ಯೆ ಮಾಡುತ್ತಾರೋ,ದೇಶದ ಕಾನೂನು ಉಲ್ಲಂಘನೆ ಮಾಡುತ್ತಾರೋ ಅಂತವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರೀಮಂತ ಬಾರಿಕಾಯಿ,ಪಾಪು ಕಿತಲಿ,ಮಲ್ಲು ಹಾವಿನಾಳಮಠ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಜರಿದ್ದರು.

ಶಂಕರ್ ಜಮಾದಾರ ಜನತಾ ಎಕ್ಸ್ಪ್ರೆಸ್ ಟಿವಿ ಇಂಡಿ (ವಿಜಯಪುರ)

Please follow and like us:

Related posts

Leave a Comment