ಆರೋಗ್ಯ / HEALTH

ಬಡ ಕುಟುಂಬಗಳಿಗೆ ದಿನಸಿ ವಿತರಿಸಿದ ಅಸ್ಲಂ ನಾಲಬಂದ ಕುಟುಂಬ

Published

on

ಅಥಣಿ: ಮೇ.೩ರವರೆಗೆ ಲಾಕ್‌ಡೌನ್ ಮುಂದುವರೆದಿರುವ ಹಿನ್ನೆಲೆಯಲ್ಲಿ ಬಡವರು,ನಿರ್ಗತಿಕರಿಗೆ ಕೆಲವು ಸಂಘ ಸಂಸ್ಥೆಗಳು ಆಹಾರ ವಿತರಣೆ ಮಾಡುತ್ತಿವೆ.
ಸದ್ಯ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕೂಲಿ ಕಾರ್ಮಿಕರು,ಬಡವರು ಮತ್ತು ನಿರ್ಗತಿಕರು ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಎದುರಾಗಿದೆ.
ಇದರ ಹಿನ್ನೆಲೆಯಲ್ಲಿ ಆಹಾರ ಅವಶ್ಯವಿರುವ ಕುಟುಂಬಗಳಿಗೆ ೫ ಕೆಜಿ ಅಕ್ಕಿ, ೫ ಕೆಜಿ ಗೋಧಿ,೨ ಕೆಜಿ ಸಕ್ಕರೆ, ಚಾಹಾ ಪುಡಿ ಸೇರಿದಂತಹ ಆಹಾರದ ಕಿಟ್‌ನ್ನು ಸುಮಾರು ೬೫೦ ಹೆಚ್ಚು ಬಡ ಕುಟುಂಬಗಳಿಗೆ ಮುಸ್ಲಿಂ ಸಮಾಜದ ಮುಖಂಡರಾದ ಅಸ್ಲಂ ನಾಲಬಂದ ಮತ್ತು ಕುಟುಂಬ ಸದಸ್ಯರು ವಿತರಿಸಿದ್ದಾರೆ.
ಅಂದ ಹಾಗೇ ಅಥಣಿ ಪಟ್ಟಣದ ನಾಲಬಂದ ಗಲ್ಲಿ ಹಾಗೂ ತಾಲೂಕಿನ ಕಡುಬಡವರಿಗೆ ಈ ಆಹಾರ ವಿತರಿಸಿರುವ ಅಥಣಿ ಮುಸ್ಲಿಂ ಸಮಾಜದ ಮುಖಂಡ ಅಸ್ಲಂ ನಾಲಬಂದ ಮಾತನಾಡಿ,ಯಾವುದೇ ಪ್ರಚಾರದ ಉದ್ದೇಶ ಅಥವಾ ಸ್ವಾರ್ಥದಿಂದ ನಾವು ದಿನಸಿ ವಸ್ತುಗಳನ್ನು ವಿತರಣೆ ಮಾಡುತ್ತಿಲ್ಲ,ಬದಲಿಗೆ ನಾನು ಕೊಡುವುÀದನ್ನು ನೋಡಿ ಮತ್ತಷ್ಟು ಬಡಜನರಿಗೆ ಸಹಾಯ ಮಾಡಲು ಉಳಿದವರು ಮುಂದಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಸಲಾಂ ಕಲ್ಲಿ , ಸೈಯದ್ ಅಮೀನ ಗದ್ಯಾಳ,ಶಬ್ಬೀರ ಸಾತಬಚ್ಚೆ , ಅಬ್ದುಲ್ ಆಸಂಗಿ ಮುಂತಾದವರು ಹಾಜರಿದ್ದರು.

ಸತೀಶ ಕೋಳಿ ಜನತಾ ಎಕ್ಸ್ಪ್ರೆಸ್ ಟಿವಿ ಅಥಣಿ(ಬೆಳಗಾವಿ)

Click to comment

Trending

Exit mobile version