ನಿಮ್ಮ ಜಿಲ್ಲೆ

ಶಿವಮೊಗ್ಗದಲ್ಲಿ ಸುಮ್ಮನೆ ಬೈಕ್‌ನಲ್ಲಿ ಸುತ್ತಿದವರಿಗೆ `ದಂಡ’..

Published

on

ಶಿವಮೊಗ್ಗ: ದಾವಣಗೆರೆಯಂತೆ ಮಲೆನಾಡು ಶಿವಮೊಗ್ಗದ ಜನರು ಕೂಡ ಲಾಕ್‌ಡೌನ್ ಲೆಕ್ಕಿಸದೇ ಬೀದಿಗಿಳಿಯುತ್ತಿದ್ದಾರೆ.
ವಿಪರ್ಯಾಸವೆಂದರೇ ಜನರು ಸುಮ್ಮನೆ ರಸ್ತೆಗೆ ಬರುವುದನ್ನು ನಿಲ್ಲಿಸಲು ಪೊಲೀಸ್ ಇಲಾಖೆ ಏನೆಲ್ಲಾ ಸರ್ಕಸ್ ಮಾಡಿದರೂ ಸಹ ಅದು ಸಾಧ್ಯವಾಗುತ್ತಿಲ್ಲ.ಅದರಲ್ಲೂ ಪ್ರಮುಖ ಸರ್ಕಲ್‌ಗಳಲ್ಲಿ ಜನರು ಬಿಂದಾಸ್ ಆಗಿ ಓಡಾಡುತ್ತಿದ್ದಾರೆ.
ಇನ್ನು ಇದೆಲ್ಲಾ ಗಮನಿಸಿದ ಪೊಲೀಸರು ಇಂದು ಹಲವು ವಾಹನ ಸವಾರರಿಗೆ ತಕ್ಕ ಪಾಠ ಕಲಿಸಿದ್ದು, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಭಾಗಗಳಲ್ಲಿಯೂ ಸಹ ಪೊಲೀಸರು ಅನವಶ್ಯಕವಾಗಿ ತಿರುಗಾಡುತ್ತಿದ್ದವರನ್ನು ಹಿಡಿದು ವಿಚಾರಿಸಿ ದಂಡ ಹಾಕುತ್ತಿದ್ದಾರೆ. ಅಲ್ಲದೆ, ದಂಡ ನೀಡದೆ ಇದ್ದಲ್ಲಿ ಬೈಕ್‌ಗಳನ್ನು ವಶಪಡಿಸಿಕೊಳ್ಳುತ್ತಿದ್ದು,ಇದರಿಂದ ಸುಮ್ಮನೆ ಸುತ್ತಿ ಲಾಕ್‌ಡೌನ್ ವಿಫಲಗೊಳಿಸುವವರಿಗೆ ತಕ್ಕ ಪಾಠ ಕಲಿಸುತ್ತಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಶಿವಮೊಗ್ಗ

Click to comment

Trending

Exit mobile version