ಆಹಾರ ಧಾನ್ಯ ಕಿಟ್ ಹಂಚಿಕೆ, ಬಿಜೆಪಿಯಿಂದ ಗೋಲ್‌ಮಾಲ್

ಹುಬ್ಬಳ್ಳಿ:ಆಹಾರ ಧಾನ್ಯ ಕಿಟ್ ಹಂಚಿಕೆಯಲ್ಲೂ ಬಿಜೆಪಿಯಿಂದ ಗೋಲ್ ಮಾಲ್ ನಡೆದಿರೋ ಆರೋಪ ಕೇಳಿ ಬಂದಿದೆ.
ಸದ್ಯ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ನೀಡಿದ ಕಿಟ್‌ನ್ನ ಬಿಜೆಪಿ ದುರ್ಬಳಿಕೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಅAದ ಹಾಗೇ ಬಡವರು,ನಿರ್ಗತಿಕರಿಗೆ ನೀಡಲು ಸುಧಾಮೂರ್ತಿಯವರು ಇನ್ಫೋಸಿಸ್ ಫೌಂಡೇಶನ್‌ನಿAದ ಆಹಾರದ ಕಿಟ್‌ಗಳನ್ನು ಸರ್ಕಾರಕ್ಕೆ ನೀಡಿದ್ದಾರೆ. ಆದರೆ ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ಈ ಆಹಾರದ ಕಿಟ್‌ಗಳು ದುರ್ಬಳಿಕೆಯಾಗುತ್ತಿವೆ.
ಈ ಆಹಾರಧಾನ್ಯ ಕಿಟ್‌ಗಳನ್ನು ನಾವೇ ಕೊಡುತ್ತಿದ್ದೇವೆ ಎಂದು ಬಿಜೆಪಿ ಪೋಸ್ ಕೊಡುತ್ತಿದೆ.ಕಿಟ್‌ಗಳ ಮೇಲೆ ಸುಧಾ ಮೂರ್ತಿ ಅಂತ ಹೆಸರು ಇದ್ದರೂ, ನಾವೇ ಕೊಟ್ಟಿರೋದಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ನಲ್ಲಿ ಬಿಜೆಪಿ ಮುಖಂಡ ಪ್ರಭು ನವಲಗುಂದಮಠ ಹಾಕಿಕೊಂಡಿದ್ದಾರೆ.
ಇನ್ನು ಜಿಲ್ಲಾಡಳಿತಕ್ಕೆ ದಾನಿಗಳು ನೀಡಿದ್ದ ಕಿಟ್‌ಗಳು ಬಿಜೆಪಿ ಮುಖಂಡರ ಕೈಗೆ ಸಿಕ್ಕಿದ್ದೇಗೆ?,ದಾನಿಗಳು ನೀಡಿದ್ದ ಆಹಾರ ಕಿಟ್‌ಗಳನ್ನ ಹಂಚಿ ಬಿಟ್ಟಿ ಪ್ರಚಾರ ಪಡೆಯುತ್ತಿದಿಯಾ ಬಿಜೆಪಿ?ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು,ಜಿಲ್ಲಾಡಳಿತ ಈ ಬಗ್ಗೆ ತನಿಖೆ ನಡೆಸಬೇಕು ಎಂದುಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜು ಮುದ್ಗಲ್ ಎಕ್ಸ್ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment