ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ, ಮಳವಳ್ಳಿಗೆ ಎಡಿಜಿಪಿ ಭೇಟಿ ನೀಡಿ ಪರಿಶೀಲನೆ

ಮಳವಳ್ಳಿ: ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೧೧ಕ್ಕೆ ಏರಿಕೆಯಾಗಿದೆ. ಮಳವಳ್ಳಿಯಲ್ಲಿ ಇಂದು ಮತ್ತೆ ೩ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಮೂರು ಪ್ರಕರಣಗಳು ತಬ್ಲಿಘಿ ಸಂಪರ್ಕದಲ್ಲಿದ್ದ ವ್ಯಕ್ತಿಯಿಂಜ ಬಂದಿದೆ ಎಂದು ಗೊತ್ತಾಗಿದೆ.
೨೫,೨೯ ಮತ್ತು ೩೯ ವರ್ಷದ ವ್ಯಕ್ತಿಗಳಲ್ಲಿ ಸೋಂಕಿರುವುದು ಇಂದು ಪತ್ತೆಯಾಗಿದೆ. ಈ ಮೂವರು ವ್ಯಕ್ತಿಗಳು ಪೇಷಂಟ್ ನಂಬರ್ ೧೭೧ರ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ.
ಇನ್ನು ಮಳವಳ್ಳಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವುದರಿಂದ ಜನರಲ್ಲಿ ಆತಂಕ ಶುರುವಾಗಿದ್ದು, ಮತ್ತಷ್ಟು ಜನರನ್ನು ಹೋಂ ಕ್ವಾರೆಂಟೈನ್ ಗೆ ಒಳಪಡಿಸಲು ಮಂಡ್ಯ ಜಿಲ್ಲಾಡಳಿತ ಮುಂದಾಗಿದೆ.
ಇದೇ ವೇಳೆ ಮಳವಳ್ಳಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಎಡಿಜಿಪಿ
ಡಾ.ಪರಶಿವಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಳವಳ್ಳಿ ಪಟ್ಟಣದ. ಡಿವೈಎಸ್‌ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಳವಳ್ಳಿ ಜನತೆ ಗಾಬರಿಯಾಗಬೇಡಿ,ಆದರೆ ಉಡಾಫೆ ಮಾಡಬೇಡಿ.ಬದಲಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಈದ್ಗಾ ಮೊಹಲ್ಲಾ, ಕೋಟೆ ಕಾಳಮ್ಮ ಬೀದಿ ಸೇರಿದಂಥೆ ತಾಲ್ಲೂಕಿನ ಬಾಚನಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.
ಈ ವೇಳೆ ದಕ್ಷಿಣ ವಲಯದ ಐಜಿಪಿ ವಿಪುಲ್ ಕುಮಾರ್, ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿ ಪರಶುರಾಮ್, ಅಪಾರ ಪೊಲೀಸ್ ವರಿಷ್ಠ ಅಧಿಕಾರಿ ಡಾ.ಶೋಭಾರಾಣಿ, ಡಿವೈಎಸ್ಪಿ ಪೃಥ್ವಿ, ಸರ್ಕಲ್ ಇನ್ಸ್ ಪೆಕ್ಟರ್‌ಗಳಾದ ಧರ್ಮೇಂದ್ರ, ರಮೇಶ್ ಪಿಎಸ್‌ಐ ಮಂಜು ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

ಎನ್.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ (ಮಂಡ್ಯ)

Please follow and like us:

Related posts

Leave a Comment