ಆರೋಗ್ಯ / HEALTH

ಮದ್ಯಪ್ರಿಯರೇ ಎಣ್ಣೆ ಬೇಕಾ..?ಸೀದಾ ಆನೇಕಲ್‌ಗೆ ಬನ್ನಿ..ಸಿಗುತ್ತೆ..

Published

on

ಆನೇಕಲ್(ಬೆಂಗಳೂರು ನಗರ): ಎರಡನೇ ಹಂತದ ಕೊರೊನಾ ಲಾಕ್ ಡೌನ್ ಮುಂದುವರೆದ್ರು ಬ್ಲಾಕ್‌ನಲ್ಲಿ ಮಾತ್ರ ಮದ್ಯ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ಅಂದ ಹಾಗೇ ಆನೇಕಲ್ ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿರೋದು ಬೆಳಕಿಗೆ ಬಂದಿದ್ದು,ಸದ್ಯ ಈ ಅಂಗಡಿಯ ಮೇಲೆ ತಹಶೀಲ್ದಾರ್ ಮಹಾದೇವಯ್ಯ ನೇತೃತ್ವದ ತಂಡದಿAದ ರೈಡ್ ಮಾಡಿದೆ.
ಇನ್ನು ಆನೇಕಲ್ ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ಅಂಗಡಿಯರು ಮದ್ಯ ಮಾರಾಟ ಮಾಡುತ್ತಿದ್ದರು.ಹೀಗಾಗಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಹಶೀಲ್ದಾರ್ ಮಹಾದೇವಯ್ಯ ನೇತೃತ್ವದ ತಂಡ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ೧೬ ಪ್ಯಾಕೆಟ್ ಮದ್ಯ ವಶಕ್ಕೆ ಪಡೆದಿದ್ದು, ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಯನ್ನು ಸೀಜ್ ಮಾಡಲಾಗಿದೆ.
ಇದೇ ವೇಳೆ ತಮಿಳುನಾಡು ಗಡಿಭಾಗಕ್ಕೆ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿರುವ ಬಳ್ಳೂರು ಗ್ರಾಮದಲ್ಲಿ ಲಾಕ್ ಡೌನ್ ಇದ್ರು ಅಂಗಡಿಯ ಮುಂಭಾಗವೇ ಮದ್ಯದ ಪ್ಯಾಕೆಟ್‌ಗಳನ್ನು ಇಟ್ಟು ಮಾಲೀಕರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು.
ಅಲ್ಲದೆ, ಅಂಗಡಿ ಮುಂಭಾಗ ಜೋಡಿಸಿ ಬಹಿರಂಗವಾಗಿ ಮದ್ಯ ಮಾರಾಟ ಮಾಡುತ್ತಿದ್ದರು ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸಿದ್ದರೆನ್ನಲಾಗಿದೆ.ಇದೀಗ ಸ್ವತಃ ತಹಶೀಲ್ದಾರ್ ಮಹಾದೇವಯ್ಯ ದಾಳಿ ಮಾಡಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿದ್ದಾರೆ.
ಈ ನಡುವೆ ಆನೇಕಲ್ ಪಟ್ಟಣದಲ್ಲೂ ನಡೆಯುತ್ತಿದೆ ದೊಡ್ಡ ಮಟ್ಟದ ಎಣ್ಣೆ ಮಾರಾಟದ ಜಾಲ ಕಾರ್ಯನಿರ್ವಹಿಸುತ್ತಿದ್ದು, ಲಾಕ್ ಡೌನ್ ಆದ ದಿನದಿಂದಲ್ಲೂ ಬಾರ್ ಬಂದ್ ಆಗಿದ್ರು ಬ್ಲಾಕ್‌ನಲ್ಲಿ ಎಣ್ಣೆ ಮಾರಾಟ ಮಾಡಲಾಗುತ್ತಿದೆ.
ಸದ್ಯ ಇಲ್ಲಿ ಬೈಕ್‌ನಲ್ಲಿ ಬರುವ ಖತರ್ನಾಕ್ ಅಸಾಮಿಗಳು ಆನೇಕಲ್‌ನಲ್ಲಿ ಬ್ಲಾಕ್‌ನಲ್ಲಿ ಎಣ್ಣೆ ಸರಬರಾಜು ಮಾಡುತ್ತಾರೆ. ಜೊತೆಗೆ ೬೦ ರೂಪಾಯಿ ಇರುವ ಎಣ್ಣೆ ಪ್ಯಾಕೆಟ್ ಬ್ಲಾಕ್‌ನಲ್ಲಿ ೫೦೦ ರೂಪಾಯಿಗೆ ಮಾರಾಟ ಮಾಡಲಾಗುತ್ತದೆ.
ವಿಪರ್ಯಾಸವೆಂದರೆ ಆನೇಕಲ್‌ನಲ್ಲಿ ಮದ್ಯ ಪ್ಯಾಕೆಟ್ ಖರೀದಿ ಮಾಡಿ ಕೆಲ ಅಸಾಮಿಗಳು ಸಿಕ್ಕಿ ಬಿದ್ರೆ,ಇನ್ನು ಕೆಲವರು ಎಣ್ಣೆ ಪ್ಯಾಕೆಟ್ ಹಿಡಿದು ಸಿನಿಮಾ ಹೀರೋ ರೀತಿ ಪೋಸ್ ಕೊಡುತ್ತಾರೆ.ಹಾಗೇ ಫುಲ್ ಎಣ್ಣೆ ಹೊಡೆದು ಟೈಟ್ ಆಗಿ ರಸ್ತೆಯಲ್ಲಿ ತೂರಾಟ,ಹಾರಾಟ ನಡೆಸುತ್ತಾರೆ.ಆದರೆ ಇದನೆಲ್ಲಾ ಗಮನಿಸಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳೇ ಎಲ್ಲಿದ್ದೀರಾ..? ಎಂಬ ಪ್ರಶ್ನೆ ಎದ್ದಿದೆ.
ಒಟ್ಟಾರೆ ಖತರ್ನಾಕ್‌ಗಳು ಬ್ಲಾಕ್‌ನಲ್ಲಿ ಫುಲ್ ಎಣ್ಣೆ ಮಾರಾಟ ನಡೆಸುತ್ತಿದ್ದರೂ,ಆನೇಕಲ್ ತಾಲ್ಲೂಕಿನ ಅಬಕಾರಿ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂಗಳೂರು ನಗರ)

Click to comment

Trending

Exit mobile version