ದೇವದುರ್ಗದಲ್ಲಿ ಪಾನ್‌ಶಾಪ್‌ಗೆ ಬೆಂಕಿ, ಸಾಮಾಗ್ರಿಗಳು ಸುಟ್ಟು ಭಸ್ಮ

ದೇವದುರ್ಗ(ರಾಯಚೂರು):ನಗರದ ಮಿನಿ ವಿಧಾನಸೌಧ ಬಳಿ ಪಾನ್‌ಶಾಪ್‌ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರೋ ಘಟನೆ ನಡೆದಿದೆ.
ಅಂದ ಹಾಗೇ ರವಿ ಎಂಬುವರಿಗೆ ಸೇರಿದ ಈ ಪಾನ್‌ಶಾಪ್‌ನಲ್ಲೇ ಬೆಂಕಿ ಅವಘಡ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಕಂಪ್ಯೂಟರ್ ಸೇರಿದಂತೆ ಅಂದಾಜು ೧.೫೦ ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿವೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.
ಈ ಸಂಬAಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Please follow and like us:

Related posts

Leave a Comment