ಕೊರೊನಾ ಭೀತಿಯಿಂದ ಮುಕ್ತವಾಗುತ್ತಿರುವ ನಾಗಲಮಂಗಲ

ನಾಗಮ0ಗಲ(ಮ0ಡ್ಯ): ಕೊರೊನಾ ವೈರಸ್ ಭೀತಿಯಿಂದ ರೆಡ್ ಝೋನ್ ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ನಾಗಮಂಗಲ ತಾಲ್ಲೂಕು ಆಡಳಿತ ತೆಗೆದುಕೊಳ್ಳಲಾಗಿರುವ ಸೂಕ್ತ ಕಾನೂನು ಕ್ರಮದ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆAಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕರೋನಾ ವೈರಸ್ ನಿಯಂತ್ರಣದ ಬಗ್ಗೆ ಪರಿಶೀಲನಾ ನಿಮಿತ್ತ ನಾಗಮಂಗಲ ತಾಲ್ಲೂಕಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ,ಆರ್.ಎಸ್.ಎಸ್. ತಾಲ್ಲೂಕು ಘಟಕದ ವತಿಯಿಂದ ಕಡುಬಡ ಕುಟುಂಬಗಳಿಗೆ ವಿತರಿಸಲಾಗುತ್ತಿರುವ ರೇಷನ್ ಕಿಟ್ ವಿತರಣೆಗೆ ಚಾಲನೆ ನೀಡುವ ಮೂಲಕ ಎಚ್ಚರ ವಹಿಸುವ ಬಗ್ಗೆ ನೀಡಲಾದ ಸಲಹೆಯೊಂದಿಗೆ ಶುಭ ಹಾರೈಸಿದರು.
ನಂತರ ಮಂಡ್ಯ ರಸ್ತೆಯ ಹನೀಫ್ ಮಸೀದಿಗೆ ಭೇಟಿ ನೀಡುವ ಮೂಲಕ ರಂಜಾನ್ ಆಚರಣೆಯ ಸಮಯದಲ್ಲಿ ಪಾಲಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ಮುಸ್ಲಿಂ ಮುಖಂಡರಿಗೆ ತಿಳಿಸಿದರು.
ತದನಂತರದಲ್ಲಿ ನಿರ್ಗತಿಕರಿಗೆ ಆಶ್ರಯ ನೀಡಿರುವ ಬಿಸಿಎಂ ಹಾಸ್ಟೆಲ್‌ಗೆ ಭೇಟಿ ನೀಡಿ, ನಿರ್ಗತಿಕರ ಆರೋಗ್ಯ ವಿಚಾರಿಸುವ ಮೂಲಕ ಅವರಿಗೆ ಪೂರೈಸುತ್ತಿರುವ ಅನುಕೂಲಗಳ ಬಗ್ಗೆ ಪರಿಶೀಲಿಸಿದರು. ಇದೇ ವೇಳೆ ಕೆಲ ನಿರ್ಗತಿಕ ಮಹಿಳೆಯರಿಗೆ ಸೀರೆ ವಿತರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ,ದೆಹಲಿಯಿಂದ ನಾಗಮಂಗಲಕ್ಕೆ ಆಗಮಿಸುವ ಮೂಲಕ ಸ್ಥಳೀಯ ಮುಸ್ಲಿಂ ಬಾಂದವರ ಸಂಪರ್ಕ ಹೊಂದಿದ್ದವರ ಪೈಕಿ ೫ ಜನರ ಆರೋಗ್ಯ ತಪಾಸಣೆ ನಡೆದಿದ್ದು, ಇವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ. ಇನ್ನುಳಿದ ೧೯ ಜನರನ್ನು ಪರೀಕ್ಷಿಸಬೇಕಿದೆ. ಆದಾಗ್ಯೂ ಸಂಪರ್ಕವಿದ್ದ ವಾರ್ಡ್ ಗಳನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿನಿತ್ಯ ನೆಡೆಸುತ್ತಿರುವ ಸಮಿಕ್ಷೆಯ ಮಾಹಿತಿ ಪರಿಶೀಲಿಸಿದ್ದೇನೆ. ಒಟ್ಟಾರೆ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ತಾಲ್ಲೂಕು ಆಡಳಿತ ಕೈಗೊಂಡಿರುವ ಕ್ರಮ ನಿಜಕ್ಕೂ ಜಿಲ್ಲೆಗೆ ಮಾದರಿ. ಗ್ರಾಮೀಣ ಭಾಗದಲ್ಲಿ ಹುಣಸೆ ಮತ್ತು ಮಾವಿನ ಫಸಲು ಮಾರಾಟ ಮಾಡುವಾಗ ಮುಸ್ಲಿಂ ಸಮುದಾಯವರಿಗೆ ರೈತ ಬಾಂದವರು ಸಹಕರಿಸಬೇಕು ಎಂದರು.
ತಹಸೀಲ್ದಾರ್ ಕುಂಞ ಅಹಮ್ಮದ್, ಇಒ ಅನಂತರಾಜು, ಪುರಸಭಾ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹಾಗೂ ವೃತ್ತ ಆರಕ್ಷಕ ನಿರೀಕ್ಷಕ ರಾಜೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಎಸ್.ವೆಂಕಟೇಶ್ ಎಕ್ಸ್ಪ್ರೆಸ್ ಟಿವಿ ನಾಗಮಂಗಲ(ಮAಡ್ಯ)

Please follow and like us:

Related posts

Leave a Comment