ತುತ್ತು ಅನ್ನಕ್ಕಾಗಿ ಮಕ್ಕಳ ಜೊತೆ ಕಣ್ಣೀರಿಟ್ಟ ತಾಯಿ..

ಗದಗ: ರಾಜ್ಯದಲ್ಲಿ ಲಾಕ್‌ಡೌನ್ ಹಿನ್ನಲೆಯಲ್ಲಿ ಆಹಾರ ಸಿಗದೆ ಮಹಿಳೆ, ಮಕ್ಕಳು ಪರದಾಟ ನಡೆಸುತ್ತಿರೋದು ಗದಗದಲ್ಲಿ ಬೆಳಕಿಗೆ ಬಂದಿದೆ.
ಸದ್ಯ ಗದಗ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಆಹಾರ ಸಿಗದ ತಾಯಿ ಎರಡು ಮಕ್ಕಳ ಜೊತೆಗೆ ಕುಳಿತು ಕಣ್ಣೀರಿಡುತ್ತಿರೋ ದೃಶ್ಯ ಕಂಡು ಬಂದಿದೆ.
ಇನ್ನು ಈಕೆ ಗದಗನ ನರಸಾಪೂರ ಗ್ರಾಮದ ರತ್ನವ ಕೊಪ್ಪಳ ಎಂಬುದಾಗಿ ತಿಳಿದು ಬಂದಿದ್ದು, ಎರಡು ಮಕ್ಕಳ ಜೊತೆ ಗದಗ ನಗರದ ತುಂಬಾ ಅನ್ನಕ್ಕಾಗಿ ಪರದಾಡಿದ್ದಾಳೆ. ಕೊನೆಗೆ ಅಲ್ಲಿದ್ದ ಸಾರ್ವಜನಿಕರು ಹಾಗೂ ಅಧಿಕಾರಿಗಳು ಮಹಿಳೆಗೆ ಉಪಹಾರ ನೀಡಿದ್ದಾರೆ.
ಈ ಮೂಲಕ ಇವತ್ತಿನ ಆ ತಾಯಿ-ಮಕ್ಕಳ ಊಟಕ್ಕೆ ದಾರಿಯಾಗಿದೆ.ಆದರೆ ನಾಳೆಯೂ ಯಾರಾದರೂ ಈಕೆಗೆ ಸಹಾಯ ಮಾಡಿದರೇ ಸರಿ,ಇಲ್ಲವಾದರೇ ಗದಗದಲ್ಲಿ ಮತ್ತದೇ ತಾಯಿ ಮಕ್ಕಳ ಕರುಣಾಜನಕ ಕಥೆ ಮುಂದುವರೆಯಲಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಗದಗ

Please follow and like us:

Related posts

Leave a Comment