ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಲಾಕ್‌ಡೌನ್ ಘೋಷಿಸಿರುವ ನಡುವೆಯೇ ಇಂದು೨೦೨೦-೨೧ ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಯಾಗಿದ್ದು,ಈ ಬಾರಿಯ ಬಜೆಟ್ ೧೦,೮೯೯ ಕೋಟಿ ರೂ. ಗಾತ್ರದ್ದಾಗಿದೆ.
ಅಂದ ಹಾಗೇ ಈ ಬಾರಿಯ ಬಜೆಟ್‌ನಲ್ಲಿ ಶೇ. ೨೪.೩೦ ಅನುದಾನದ ಕಾರ್ಯಕ್ರಮಗಳಿಗೆ ೩೬೧ ಕೋಟಿ ರೂ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ೧೦೮ ಕೋಟಿ ರೂ, ವಿಶೇಷ ಚೇತನ ಕಲ್ಯಾಣ ಕಾರ್ಯಕ್ರಮಗಳಿಗೆ ೭೪ ಕೋಟಿ ರೂ, ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗೆ ೯ ಕೋಟಿ ರೂ, ೧೦ ಸಾವಿರ ಲೀಟರ್‌ವರೆಗೆ ಉಚಿತ ಕಾವೇರಿ ನೀರು ಕಾರ್ಯಕ್ರಮಕ್ಕೆ ೪೩ ಕೋಟಿ ರೂ, ಸಾಮಾನ್ಯ ವರ್ಗದವರ ಮನೆಗೆ ೧೫ ಕೋಟಿ ರೂ, ಅರ್ಹ ಬಡ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಣೆಗೆ ೧೫ ಕೋಟಿ ರೂ ಮೀಸಲಿರಿಸಲಾಗಿದೆ ಎಂದು ಸಹ ಬಜೆಟ್‌ನಲ್ಲಿ ತಿಳಿಸಲಾಗಿದೆ.
ಜೊತೆಗೆ ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟಕ್ಕಾಗಿ ೧೫ ಕೋಟಿ ರೂ. ಹಾಗೂ ಪೌರಕಾರ್ಮಿಕರ, ಎಸ್ ಸಿ- ಎಸ್ ಟಿ, ೪ ನೇ ದರ್ಜೆಯ ಖಾಯಂ ಗುತ್ತಿಗೆ ನೌಕರರ ಕಲ್ಯಾಣಕ್ಕೆ ೧೦ ಕೋಟಿ ರೂ. ಮೀಸಲಿಡಲಾಗಿದೆ. ಪೌರಕಾರ್ಮಿಕರು ವೈಯಕ್ತಿಕ ಮನೆ ಹೊಂದಲು ೩೬ ಕೋಟಿ, ಎಸ್‌ಟಿ- ಎಸ್‌ಸಿ ಯವರು ವೈಯಕ್ತಿಕ ಮನೆ ಹೊಂದಲು ಪ್ರತಿ ವಾರ್ಡ್ ಗೆ ೫ ಮನೆಯಂತೆ ೪೯.೫೦ ಕೋಟಿ ಅನುದಾನ ಮೀಸಲಿಡಲಾಗಿದೆ.
ಇನ್ನು ಕೊರೊನಾ ವೈರಸ್ ತಡೆಗಟ್ಟಲು ಪ್ರತಿ ವಾರ್ಡ್ಗೆ ೨೫ ಲಕ್ಷದಂತೆ ಒಟ್ಟು ೪೯.೫೦ ಕೋಟಿ ರೂ.ಗಳನ್ನು ಕೊರೊನಾ ವಿಪತ್ತು ನಿಧಿಗೆ ವರ್ಗಾವಣೆ ಮಾಡಲಾಯಿತು. ಗೋ ಶಾಲೆಗಳಿಗೆ ಮೇವು ಒದಗಿಸಲು ೫೦ ಲಕ್ಷ ರೂ., ವಾಯು ಶುದ್ಧೀಕರಣ ಯಂತ್ರಗಳ ಸ್ಥಾಪನೆಗೆ ೧ ಕೋಟಿ ರೂ. ಲಿಂಕ್ ಕೆಲಸಗಾರರ ಪ್ರತಿ ತಿಂಗಳ ಸಂಭಾವನೆಯಲ್ಲಿ ೧ ಸಾವಿರ ರೂ. ಹೆಚ್ಚಳ ಮಾಡಲಾಗಿದೆ. ಮತ್ತು ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ ೧೬ ಕೋಟಿ ರೂ. ಮೀಸಲು ಇಡಲಾಗಿದೆ.
ಇದೇ ವೇಳೆ ಸಂಪನ್ಮೂಲ ಸುಧಾರಣೆ ಕ್ರಮಕ್ಕೆ ಸಂಬAಧಿಸಿದAತೆ ಬಿ ಖಾತಾ ಆಸ್ತಿಗಳನ್ನು ಎ ಖಾತಾಗಳಾಗಿ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಸರ್ಕಾರದ ಅನುಮೋದನೆಯನ್ನು ನಿರೀಕ್ಷಿಸಲಾಗಿದೆ.ಹೊಸ ವಲಯಗಳಲ್ಲಿನ ಆಸ್ತಿಗಳ ಖಾತಾಗಳ ನಕಲು ಮತ್ತು ಖಾತಾ ದೃಢೀಕರಣ ಪತ್ರಗಳನ್ನು ಗಣಕೀಕರಣ ಮಾಡಲಾಗುವುದು. ಖಾತಾ ನಕಲು ಮತ್ತು ದೃಢೀಕರಣ ಪತ್ರದ ಶುಲ್ಕವನ್ನು ದ್ವಿಗುಣಗೊಳಿಸಲಾಗಿದೆ.
ಒಂದು ವೇಳೆ ೩ ವರ್ಷಕ್ಕೂ ಅಧಿಕ ವರ್ಷದಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ಕಚೇರಿಯ ಋಣಭಾರ ಪತ್ರದಲ್ಲಿ ನಮೂದಿಸಬೇಕು. ಬಾಕಿ ಇರುವ ಸುಧಾರಣಾ ಶುಲ್ಕ ಅಂದಾಜು ೩೦೦ ಕೋಟಿ ರೂ. ವಸೂಲಿಗೆ ಕ್ರಮ ತೆಗೆದುಕೊಳ್ಳಲಾಗುವುದು. ಉದ್ದಿಮೆ ಪರವಾನಗಿ ಸರಳೀಕರಣಗೊಳಿಸಲಾಗುವುದು.ನಗರದಲ್ಲಿರುವ ಹೋಟೆಲ್‌ಗಳನ್ನು ಎ.ಬಿ.ಸಿ.ಡಿ ಮಾದರಿಯಲ್ಲಿ ವರ್ಗೀಕರಣಗೊಳಿಸಲಾಗುವುದು.
ಈ ಬಾರಿಯ ಸಂಪನ್ಮೂಲ ಸುಧಾರಣೆಗೆ ಕೇಂದ್ರ ಸರ್ಕಾರ ೫೫೮ ಕೋಟಿ ರೂ. ಅನುದಾನ ನೀಡಿದೆ. ರಾಜ್ಯ ಸರ್ಕಾರ ೩,೭೮೦ ಕೋಟಿ ರೂ. ಅನುದಾನ ನೀಡಿದೆ.
ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು