ಮಾಂಸ ತರೋಕೆ ಹೊರಟ್ಟಿದ್ದೀರಾ..ಬೇಡಾ..ಇನ್ನೆö್ಮಲೇ ಮನೆಗೆ ಬರುತ್ತೆ ಮಾಂಸದ0ಗಡಿ..!

ತುಮಕೂರು:ನಗರದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದವತಿಯಿಂದ ತುಮಕೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಸಂಚಾರಿ ಮಾಂಸ ಮಾರಾಟ ಮಳಿಗೆಗೆ ಚಾಲನೆ ನೀಡಲಾಗಿದೆ.
ಸದ್ಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ರಾಜ್ಯದಲ್ಲೇ ಪ್ರಥಮ ಬಾರಿಗೆ ತುಮಕೂರಿನಲ್ಲಿ ಸಂಚಾರಿ ಮಾಂಸ ಮಾರಾಟ ಮಳಿಗೆಯನ್ನು ಸ್ಥಾಪಿಸಿದೆ. ಇನ್ನು ಇದಕ್ಕೆ ಮಹಾನಗರ ಪಾಲಿಕೆಯು ಸಹಕಾರ ನೀಡುತ್ತಿದ್ದು, ಈ ಮಳಿಗೆಗೆ ಚಾಲನೆ ನೀಡಲಾಗಿದೆ.
ಈಗಾಗಲೇ ಮನೆ ಮನೆಗೆ ಹಣ್ಣು-ತರಕಾರಿ ತಲುಪಿಸುವ ಮಾದರಿಯಲ್ಲೇ ದೇಸಿ ತಳಿಯ ಕುರಿ ಮತ್ತು ಮೇಕೆ ಮಾಂಸವನ್ನು ಮನೆ ಮನೆಗೆ ತಲುಪಿಸುವ ಸಂಚಾರಿ ಮಾಂಸ ಮಾರಾಟ ಮಳಿಗೆಗೆ ನಗರದಲ್ಲಿ ಚಾಲನೆ ನೀಡಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಟಿ. ಭೂಬಾಲನ್,ಲಾಕ್‌ಡೌನ್ ಜಾರಿಯಲ್ಲಿ ಇರುವ ಈ ಅವಧಿಯಲ್ಲಿ ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರವನ್ನು ಹುಡುಕುವ ಕೆಲಸ ಮಾಡಲಾಗುತ್ತಿದೆ.ಅದೇ ರೀತಿ ಮಾಂಸ ತಿನ್ನುವವರಿಗೆ ಮನೆ ಮನೆಗೆ ಮಾಂಸ ತಲುಪಿಸುವ ಉದ್ದೇಶದಿಂದ ಕರ್ನಾಟಕ ಕುರಿ ಮತ್ತು ಉಣ್ಣೆ ನಿಗಮದ ವತಿಯಿಂದ ಈ ಕಾರ್ಯವನ್ನು ಆರಂಭಿಸಲಾಗಿದೆ.ಪ್ರತಿ ಕೆ.ಜಿ. ಮಾಂಸಕ್ಕೆ ೬೫೦ ರೂ. ನಿಗದಿಪಡಿಸಲಾಗಿದ್ದು, ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕ ಜಿ.ಎಂ.ನಾಗರಾಜು ಮಾತನಾಡಿ,ನಿರುದ್ಯೋಗಿ ಬಗ್ಗೆ ಯುವಕ-ಯುವತಿಯರಿಗೆ ಆರ್ಥಿಕ ನೆರವು ನೀಡಿ ಮಾಂಸ ಮತ್ತು ಮಾಂಸದಿAದ ತಯಾರಾಗುವ ವಿವಿಧ ಖಾದ್ಯಗಳ ಪದಾರ್ಥಗಳ ಮಾರಾಟಕ್ಕೆ ಸಂಚಾರಿ ಮಾರಾಟ ಮಳಿಗೆ ಸ್ಥಾಪಿಸಲಾಗಿದೆ.ಈ ಮಳಿಗೆಯಲ್ಲಿ ದೇಸಿ ತಳಿಯ ಕುರಿ ಮತ್ತು ಮೇಕೆ ಮಾಂಸವನ್ನು ಸುಲಭ ದರದಲ್ಲಿ ಕುರಿಗಾರರಿಂದ ಖರೀದಿಸಿ ಗ್ರಾಹಕರಿಗೆ ನೀಡಲಾಗುವುದು ಎಂದರು.
ನಗರದಲ್ಲಿ ಯಾವ ಗ್ರಾಹಕರಿಗೆ ಕುರಿ ಮತ್ತು ಮಾಂಸ ಬೇಕು ಎಂದು ಇಚ್ಛೆಪಟ್ಟು ಕುವೆಂಪು ನಗರದ ಲಕ್ಷ್ಮಿ ಮತ್ತು ರಮೇಶ್ ಅವರಿಗೆ ದೂರವಾಣಿ ಕರೆ ಮಾಡಿದರೆ ಸುಲಭವಾದ ದರದಲ್ಲಿ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ ಎಂದು ಹೇಳಿದರು.
ಅರ್ಧ ಹಾಗೂ ಒಂದು ಕಿ.ಗ್ರಾಂ ತೂಕದ ಪೊಟ್ಟಣಗಳಲ್ಲಿ ಮಾಂಸ ಈ ಸಂಚಾರಿ ಮಳಿಗೆಯಲ್ಲಿ ಲಭ್ಯ ಇರುತ್ತದೆ. ಆಸಕ್ತ ಗ್ರಾಹಕರು ಲಕ್ಷ್ಮಿದೇವಿ ರಮೇಶ್ ಮೊ: ೯೯೦೦೩೯೧೮೯೭ ರವರನ್ನು ಸಂಪರ್ಕಿಸಬಹುದು.ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ನರಸಿಂಹಮೂರ್ತಿ, ಶ್ರೀನಿವಾಸ್, ಧನಿಯಾಕುಮಾರ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗೇಶ್‌ಕುಮಾರ್, ವ್ಯವಸ್ಥಾಪಕ ಮಹೇಶ್, ಮಾಂಸ ವಿತರಕ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment