ಆರೋಗ್ಯ / HEALTH

ಹೋಮ್ ಡೆಲಿವರಿ ಯೋಜನೆಗೆ ಸಿಎಂ ಚಾಲನೆ

Published

on

ಬೆಂಗಳೂರು: ಲಾಕ್‌ಡೌನ್ ನೀತಿಯನ್ನು ಜನ ಸಾಮಾನ್ಯರು ಕಟ್ಟುನಿಟ್ಟಾಗಿ ಪಾಲಿಸಲು ಅನುಕೂಲಕರವಾಗುವಂತೆ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಹೋಮ್ ಡೆಲಿವರಿ ಯೋಜನೆಗೆ ಇಂದು ಸಿಎಂ ಬಿ.ಎಸ್.‌ ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ಹೋಮ್ ಡೆಲಿವರಿ ಕಾರ್ಯಕ್ರಮವನ್ನು ಬಿಬಿಎಂಪಿ ಯೋಜಿಸಿದ್ದು ಗೃಹ ಕಚೇರಿ ಕೃಷ್ಣಾದಲ್ಲಿ ಈ ಯೋಜನೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಜಾರಿ ಮಾಡಲಾಗಿದ್ದು, ಇದಕ್ಕಾಗಿ ಸುಮಾರು 5,000 ಡೆಲಿವರಿ ಬಾಯ್ ಗಳನ್ನು ನಿಯೋಜಿಸಲಾಗಿದೆ.
ಈ ಮೂಲಕ ಜನ ಸಾಮಾನ್ಯರು ತಮಗೆ ಬೇಕಾದ ಅಗತ್ಯ ದಿನಸಿ ಸಾಮಾಗ್ರಿ ಮತ್ತು ಔಷಧಿಗಳನ್ನು ಮನೆ ಬಾಗಿಲಲ್ಲೇ ಪಡೆಯಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ ನಗರದ ಒಟ್ಟು 18,000 ವರ್ತಕರ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಮನೆಯಿಂದ ಹೊರಗೆ ಬಾರದೆ ಇರಲು ಈ ಕಾರ್ಯಕ್ರಮ ಸಹಾಯ ವಾಗಲಿದೆ. ಈ ಮೂಲಕ ಜನರು ರಸ್ತೆಯಲ್ಲಿ ಓಡಾಡುವುದನ್ನು ತಪ್ಪಿಸಬಹುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version