ಬಾಗಲಕೋಟೆಯಲ್ಲಿ ಇಬ್ಬರು ಕೊರೊನಾ ಸೋಂಕಿತರು ಗುಣಮುಖ:ಆಸ್ಪತ್ರೆಯಿಂದ ಡಿಸ್ಚಾರ್ಜ್..

ಬಾಗಲಕೋಟೆ: ಕೊರೊನಾ ವೈರಸ್ ಸೋಂಕಿತರಲ್ಲಿ ಇಬ್ಬರು ಗುಣಮುಖರಾದ ಹಿನ್ನೆಲೆ ಅವರನ್ನು ಆಸ್ಪತ್ರೆಯಿಂದ ಇಂದು ಬಿಡುಗಡೆ ಮಾಡಲಾಗಿದೆ.
ಸೋಂಕಿತರನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಕೇಸ್ ನಂಬರ್ ೧೬೧ ಹಾಗೂ ೧೬೨ ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಇಬ್ಬರಿಗೂ ಹೂಗುಚ್ಚ ಕೊಟ್ಟು ಚಪ್ಪಾಳೆ ತಟ್ಟಿ, ಜಿಲ್ಲಾಸ್ಪತ್ರೆ ಸರ್ಜನ್ ಡಾ. ಪ್ರಕಾಶಬಿರಾದಾರ ಹಾಗೂ ಸಿಬ್ಬಂದಿ ಶುಭ ಕೋರಿದರು.
ವೈದ್ಯರಿಗೆ ಕೈ ಮುಗಿದು ಧನ್ಯವಾದ ಹೇಳಿದ ರೋಗಿಗಳು, ವಾಹನದ ಮೂಲಕ ಮನಗೆ ತೆರಳಿದರು. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ೨೦ರಿಂದ ೧೮ಕ್ಕೆ ಇಳಿದಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Please follow and like us:

Related posts

Leave a Comment