ಟಿಪ್ಪರ್ ಚಾಲಕರಿಗೆ ಸಂಬಳ ಕೊಡದೇ ಸತಾಯಿಸುತ್ತಿರುವ ಪಾಲಿಕೆ..

ಹುಬ್ಬಳ್ಳಿ:ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆ-ಮನೆಗೆ ಕಸ ಸಂಗ್ರಹಣೆ ಮಾಡುತ್ತಿರುವ ಟಿಪ್ಪರ್ ಚಾಲಕರಿಗೆ ಎರಡು ತಿಂಗಳಿAದ ವೇತನ ನೀಡದೇ ಸತಾಯಿಸಲಾಗುತ್ತಿದ್ದು, ವೇತನ ನೀಡುವಂತೆ ಮನವಿ ಮಾಡಿದ ಚಾಲಕರನ್ನು ವಿನಾಕಾರಣ ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿ ಟಿಪ್ಪರ್ ಚಾಲಕರು ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಅನೇಕರು ಟಿಪ್ಪರ್ ಚಾಲನೆ ಕೆಲಸ ಮಾಡುತ್ತಿದ್ದಾರೆ.ಆದರೆ ಪಾಲಿಕೆ ಮತ್ತು ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ವೇತನ ಪಾವತಿಸದೇ ಸತಾಯಿಸುತ್ತಿದ್ದಾರೆ. ಅತೀ ಕಡಿಮೆ ವೇತನದಲ್ಲಿ ಚಾಲಕರು ಸೇವೆ ಸಲ್ಲಿಸುತ್ತಿದ್ದು, ಇಎಸ್‌ಐ, ಪಿಎಫ್ ಮರೀಚಿಕೆಯಾಗಿದೆ. ಅವಳಿ ನಗರದಲ್ಲಿ ನಿತ್ಯ ತ್ಯಾಜ್ಯ ಸಂಗ್ರಹಣೆ ಮಾಡುತ್ತಿದ್ದು, ಪಾಲಿಕೆ ಅಧಿಕಾರಿಗಳಿಗೆ ನಮ್ಮ ಸಮಸ್ಯೆ ಬಗೆಹರಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.ಅಲ್ಲದೇ ಟಿಪ್ಪರ್ ಚಾಲಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ಮಾಡಿದ್ದು ವಿಶೇಷವಾಗುತ್ತು.
ಎರಡು ತಿಂಗಳಿAದ ವೇತನವಿಲ್ಲದೇ ಟಿಪ್ಪರ್ ಚಾಲಕರು ಕುಟುಂಬ ನಿರ್ವಹಣೆ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಿ ವೇತನ ಸಂದಾಯ ಮಾಡಬೇಕು. ಒಂದು ವೇಳೆ ತಕ್ಷಣವೇ ವೇತನ ಪಾವತಿಸದೇ ಹೋದಲ್ಲಿಪಾಲಿಕೆ ಮತ್ತು ಗುತ್ತಿಗೆದಾರರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ಪಾಲಿಕೆ ಅಪರ ಆಯುಕ್ತ ಅಜೀಜ್ ದೇಸಾಯಿ ಮೂಲಕ ಮನವಿ ಸಲ್ಲಿಸಿದರು.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment