ಇಲ್ಲಿ ಚರಂಡಿಯಲ್ಲೇ ಕುಡಿಯುವ ನೀರಿನ ನಲ್ಲಿ..

ಶಿರಾ(ತುಮಕೂರು): ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದಾಗಿ ಶಿರಾ ತಾಲ್ಲೂಕು ಮಾರಮಗೆರೆಯ ಜೋಗಿ ಜೋಪಡಿ ಬಳಿ
ಬೀದಿಯಲ್ಲಿನ ಕುಟುಂಬವೊAದು ಹರಿಯುತ್ತಿರುವ ಚರಂಡಿ ನೀರಿನ ಮಧ್ಯದಲ್ಲೇ ಕುಡಿಯುವ ನೀರನ್ನು ಪಡೆಯುತ್ತಿದೆ.
ಸದ್ಯ ಜೋಗಿ ಜೋಪರ ಪಟ್ಟಿಯಲ್ಲಿ ಬೀದಿಗಳಲ್ಲಿ ಸಣ್ಣಪುಟ್ಟ ಜವಳಿ ಕೂದಲ ಮತ್ತಿತರ ವ್ಯಾಪಾರ ವೃತ್ತಿ ಮಾಡುವ ಜನರೇ ಹೆಚ್ಚು ವಾಸಿಸುವ ಈ ಗ್ರಾಮದಲ್ಲಿ ಚರಂಡಿ ನಿರ್ಮಾಣವಾಗಿದೆ.
ಆದರೆ ಚರಂಡಿ ನಿರ್ಮಿಸುವುದಕ್ಕೂ ಮುನ್ನ ಗೋಡೆಗೆ ಕುಡಿಯುವ ನೀರಿನ ನಲ್ಲಿಯನ್ನು ಅಳವಡಿಸಲಾಗಿತ್ತು. ಈ ವೇಳೆ ಚರಂಡಿ ನಿರ್ಮಾಣ ಮಾಡುವಾಗ ನಲ್ಲಿಯನ್ನು ಬೇರೆಡೆಗೆ ಅಳವಡಿಸದೇ ಇರುವುದು ಸಮಸ್ಯೆಗೆ ಕಾರಣವಾಗಿದೆ.
ಇನ್ನು ಚರಂಡಿಯಲ್ಲಿ ಕಲ್ಲೊಂದನ್ನು ಇಟ್ಟು ಅದರ ಮೇಲೆ ಕೊಡವಿಟ್ಟು ನಲ್ಲಿಯಿಂದ ಕುಡಿಯುವ ನೀರು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಚರಂಡಿ ನೀರು ಸಂಪೂರ್ಣವಾಗಿ ಮುಂದಕ್ಕೆ ಹೋಗದೇ ಇಲ್ಲಿಯೇ ನಿಂತು ಬಿಡುತ್ತಿದೆ.
ಇದಲ್ಲದೆ, ಚರಂಡಿ ನಿರ್ಮಿಸುವಾಗ ಕುಡಿಯುವ ನೀರಿನ ನಲ್ಲಿಯನ್ನು ಬೇರೆಡೆ ಅಳವಡಿಸಲಿಲ್ಲ. ನಾವೇ ಅಳವಡಿಸಿಕೊಳ್ಳುವುದಕ್ಕೆ ಅಷ್ಟೊಂದು ಹಣ ನಮ್ಮಲ್ಲಿಲ್ಲ. ಕೂಲಿಯಿಂದ ಸಿಗುವ ಹಣ ಊಟಕ್ಕೆ ಸಾಕಾಗುವುದಿಲ್ಲ. ಹೀಗಾಗಿ, ಅನಿವಾರ್ಯವಾಗಿ ಚರಂಡಿ ನೀರಿನ ಮಧ್ಯೆ ಕಲ್ಲೊಂದನ್ನು ಇಟ್ಟು ನೀರು ಪಡೆಯುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.
ಇದೇ ವೇಳೆ ತಾವರೆಕೆರೆ ಪಂಚಾಯಿತಿ, ತಾಲ್ಲೂಕು ಆಡಳಿತ,ಆರೋಗ್ಯ ಇಲಾಖೆ, ಇಲ್ಲಿನ ಜನಪ್ರತಿನಿಧಿಗಳು ಬಡವರ ಬಗ್ಗೆ ಈ ರೀತಿಯ ನಿರ್ಲಕ್ಷ್ಯ ವಹಿಸುವುದು ಎಷ್ಟು ಸರಿ ಎಂದು ಸಾಮಾಜಿಕ ಕಾರ್ಯಕರ್ತ ಲಿಂಗದಹಳ್ಳಿ ಚೇತನ್ ಕುಮಾರ್ ಆರೋಪಿಸಿದ್ದಾರೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment