ಶಿರಾದಲ್ಲಿ ಗರ್ಭಿಣಿ ಅಧಿಕಾರಿಯ ಜನ ಸೇವೆ

ಶಿರಾ(ತುಮಕೂರು): ಕೊರೊನಾದಿಂದ ಇಡೀ ದೇಶವೇ ಭಯಭೀತವಾಗಿದ್ದು , ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಡುವೆ ತುಮಕೂರು ಜಿಲ್ಲೆಯ ಶಿರಾ ತಹಶೀಲ್ದಾರ್ ತಮ್ಮ ಕುಟುಂಬದವರಿAದ ದೂರ ಉಳಿದು ಜನರ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಿದ್ದಾರೆ.ಅಲ್ಲದೆ,ತಾನು ಗರ್ಭಿಣಿ ಅನ್ನುವುದನ್ನು ಲೆಕ್ಕಿಸದೇ ನಾಗರಿಕರ ಸಲುವಾಗಿ ಓಡಾಡುತ್ತಿದ್ದಾರೆ.
ಈಗಾಗಲೇ ಶಿರಾದಲ್ಲಿ ೨ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ನಾಹಿದಾ ಜಮ್ ಜಮ್ ತಾವೇ ಖುದ್ದು ನಿಂತು ಕಾರ್ಯ ವೈಖರಿಯನ್ನು ನೋಡುತ್ತಿದ್ದಾರೆ.
ಈಗಾಗಲೇ ೩೨ ಜನರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು , ನಿತ್ಯ ಅವರಿರುವ ಪ್ರದೇಶಕ್ಕೆ ತೆರಳಿ ಪರಿಶೀಲಿಸುತ್ತಿದ್ದಾರೆ.
ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪತಿ ಮೊಹತುರ್ ಅವರು ಸದ್ಯ ಶಿರಾ ಪಟ್ಟಣಕ್ಕೆ ಬಂದು ಪತ್ನಿಗೆ ನೈತಿಕ ಸ್ಥೈರ್ಯ ತುಂಬುತ್ತಿದ್ದಾರೆ.
ಒಟ್ಟಾರೆ ಹಗಲು ರಾತ್ರಿ ಅನ್ನದೆ ಯಾವುದೇ ಕರೆ ಬಂದರು ತಾವು ಮುಂದೆ ನಿಂತು ಕೊರೋನಾ ಯೋಧೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರ ಸೇವೆಗೆ ತಾಲೂಕಿನ ಜನ ಪ್ರಶಂಸೆಯ ಮಳೆಗರೆಯುತ್ತಿದ್ದಾರೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment