ಆರೋಗ್ಯ / HEALTH

ನಂಜನಗೂಡು ತಾಲೂಕಿನಲ್ಲಿ ಮೀನು ಬರುತ್ತಿದ್ದಂತೆ ಮುಗಿಬಿದ್ದ ಜನರು..

Published

on

ನಂಜನಗೂಡು(ಮೈಸೂರು):ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹರತಲೆ ಗ್ರಾಮದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಜನರು ಮೀನು ಖರೀದಿಸಿದ್ದಾರೆ.
ಮಾಂಸ ಮತ್ತು ಮೀನು ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ್ದರೂ, ಜನ ಮಾತ್ರ ಸಿಗುತ್ತೋ? ಇಲ್ವೋ ಎಂಬAತೆ ಒಬ್ಬರ ಮೇಲೆ ಒಬ್ಬರು ಬಿದ್ದು ಮೀನು ಖರೀದಿಸಿದ್ದಾರೆ.
ಸದ್ಯ ಹರತಲೆ ಗ್ರಾಮದ ಕೆರೆಯ ಬಳಿ ಕಾದು ಕುಳಿತಿದ್ದ ಜನರು, ಮೀನು ಬರುತ್ತಿದ್ದಂತೆ ಮುಗಿಬಿದ್ದಿದ್ದಾರೆ. ಮೀನು ಖರೀದಿಸುವ ಅವಸರದಲ್ಲಿ ಯಾರು ಸಹ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಮಾಸ್ಕ್ ಸಹ ಹಾಕದೇ ನಿರ್ಲಕ್ಷ್ಯ ತೋರಿದ್ದಾರೆ.
ಇನ್ನು ತಾಲೂಕಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದ್ರೂ, ಹರತಲೆ ಗ್ರಾಮಸ್ಥರಿಗೆ ಪ್ರಾಣಕ್ಕಿಂತ ಮೀನು ಹೆಚ್ಚಾದಂತೆ ಕಾಣಿಸಿದೆ.

ಮೋಹನ್ ಕುಮಾರ್ ಎಕ್ ್ಸಪ್ರೆಸ್ ಟಿವಿ ನಂಜನಗೂಡು(ಮೈಸೂರು)

Click to comment

Trending

Exit mobile version