ಸಿಂಧನೂರಿನಲ್ಲಿ ನಿಯಮ ಉಲ್ಲಂಘಿಸಿದ ಶಾಸಕರು,ಸಂಸದರು,ಅಧಿಕಾರಿಗಳು..

ಸಿAಧನೂರು(ರಾಯಚೂರು): ಸಾಮಾಜಿಕ ಅಂತರ ಕಾಪಾಡಲು ಜನರಿಗೆ ಆದೇಶ ಮಾಡುವ ಶಾಸಕರು ಸಂಸದರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಸ್ವತಃ ತಾವೇ ಸಾಮಾಜಿಕ ಅಂತರ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.
ಮಹಾಮಾರಿ ಕೋವಿಡ್-೧೯ ತಡೆಗಟ್ಟಲು ಸರ್ಕಾರದಿಂದ ಸಾಗರೋಪಾದಿಯಲ್ಲಿ ಕೆಲಸ ನಡೆದಿದೆ.ಮಹಾಮಾರಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಭಾರತವನ್ನು ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.ಅವಶ್ಯಕವಾಗಿ ರಸ್ತೆಯ ಮೇಲೆ ಬರದಂತೆ ಮನವಿ ಮಾಡಲಾಗಿದೆ.ಅಲ್ಲದೆ,ಜನರು ಗುಂಪು ಗುಂಪಾಗಿ ಸೇರಿದರೆ ಕೊರೊನಾ ವೈರಸ್ ತಡೆಗಟ್ಟಲು ಅಸಾಧ್ಯವಾಗುತ್ತದೆ.ಹೀಗಾಗಿಯೇ ಸಾಮಾಜಿಕ ಅಂತರ ಕಾಪಾಡುವಂತೆ ದೇಶದ ಪ್ರಧಾನ ಮಂತ್ರಿಯಿAದ ಗ್ರಾಮ ಪಂಚಾಯತಿ ಸದಸ್ಯರವರೆಗೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ…
ಆದರೆ ಸಿಂಧನೂರಿನಲ್ಲಿ ಮಾತ್ರ ಸ್ವತಃ ಶಾಸಕರು ಸಂಸದರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳೇ ಇದನ್ನ ಸಾಮಾಜಿಕ ಅಂತರ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.
ಅಂದ ಹಾಗೆ ಇತ್ತೀಚಿಗೆ ಅಕಾಲಿಕ ಮಳೆಯಿಂದ ತಾಲೂಕಿನಲ್ಲಿ ನೂರಾರು ಹೆಕ್ಟೇರ್ ಪ್ರದೇಶದ ಭತ್ತ ಬೆಳೆಯು ಸಂಪೂರ್ಣ ನಾಶವಾಗಿದೆ. ಹೀಗಾಗಿ ಕೊಪ್ಪಳ ಸಂಸದ ಸಂಗಣ್ಣ ಕರಡಿ,ಮಾಜಿ ಸಚಿವ. ಶಾಸಕ ವೆಂಕಟರಾವ್ ನಾಡಗೌಡ ಸೇರಿದಂತೆ ತಾಲೂಕು ದಂಡಧಿಕಾರಿ ಮಂಜುನಾಥ ಭೋಗವತಿ ಜೊತೆಗೆ ಇತರೆ ಅಧಿಕಾರಿಗಳು ಇದರ ವೀಕ್ಷಣೆ ಮಾಡಿದ್ದಾರೆ.
ಆದರೆ ವೀಕ್ಷಣೆ ಮಾಡುವ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡುಬೇಕಾದ ಇವರೆಲ್ಲರೇ ಅದನ್ನು ಉಲ್ಲಂಘಿಸಿದ್ದಾರೆ.

ಸೈಯದ್ ಬಂದೇನವಾಜ್ ಎಕ್ ್ಸಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment