ನಾಗಮಂಗಲದಲ್ಲಿ ಕೊರೊನಾ ಪರೀಕ್ಷೆಗೆ ಚಾಲನೆ..

ನಾಗಮಂಗಲ(ಮAಡ್ಯ):ವಿಶ್ವವ್ಯಾಪಿ ಮರಣ ಮೃದಂಗದ ರಣಕೇಕೆಯ ಮೂಲಕ ಸಾರ್ವಜನಿಕ ವಲಯದಲ್ಲಿ ತೀವ್ರ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ತಪಾಸಣೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿನ ಯುನಾನಿ ಆಸ್ಪತ್ರೆಯ ಪಕ್ಕದ ಕಟ್ಟಡದಲ್ಲಿ ಸಾಮೂಹಿಕ ಗಂಟಲು ದ್ರವ ಮತ್ತು ರಕ್ತ ಪರೀಕ್ಷೆಗೆ ಚಾಲನೆ ನೀಡಲಾಯಿತು..
ದೆಹಲಿಯಿಂದ ಆಗಮಿಸಿದ್ದ ೧೦ ಜನ ಮುಸ್ಲಿಂ ಧರ್ಮಗುರುಗಳ ಪೈಕಿ ಕೆಲವರಿಗೆ ಕೊರೊನಾ ವೈರಸ್ ಧೃಡಪಟ್ಟಿರುವ ಹಿನ್ನಲೆಯಲ್ಲಿ, ಧರ್ಮಗುರುಗಳ ಸಂಪರ್ಕದಲ್ಲಿದ್ದ ೨೪ ಶಂಕಿತರ ಪೈಕಿ ೫ ಜನಗಳಲ್ಲಿ ನೆಗೆಟಿವ್ ಬಂದಿದ್ದರೂ,ಮುAಜಾಗ್ರತಾ ಕ್ರಮವಾಗಿ ಪಟ್ಟಣದ ೧೨,೧೪,೧೫ &೧೬ನೇವಾಡ್‌ಗಳನ್ನು ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಆದಾಗ್ಯೂ ನಿಷೇಧಿತ ಪ್ರದೇಶದಲ್ಲಿ ಹೋಂ ಕ್ವಾರಂಟೆನ್‌ನಲ್ಲಿ ರುವವರ ಜೊತೆಗೆ ಕರೋನಾ ವೈರಸ್ ಪತ್ತೆಯಾಗುವ ಗುಣ ಲಕ್ಷಣವಿರುವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.
ಈ ಬಗ್ಗೆ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ,ತಾಲ್ಲೂಕಿನ ಮಟ್ಟಿಗೆ ಸಧ್ಯದ ಪರಿಸ್ಥಿತಿಯಲ್ಲಿ ಆತಂಕಪಡುವ ಅಗತ್ಯವಿಲ್ಲದಿದ್ದರೂ,ಸರ್ಕಾರದ ಆದೇಶದನ್ವಯ ಸಾಮೂಹಿಕ ಕೊರೊನಾ ಪರೀಕ್ಷೆಗೆ ಚಾಲನೆ ನೀಡಲಾಗಿದೆ.ಪಟ್ಟಣ ವ್ಯಾಪ್ತಿ ಮಾತ್ರವಲ್ಲದೆ ತಾಲ್ಲೂಕಿನಾಧ್ಯ ಸಮಿಕ್ಷೆ ನೆಡೆಯುತ್ತಿದೆ.ಸಮಿಕ್ಷೆಯ ಮಾಹಿತಿ ಮಾತ್ರವಲ್ಲದೆ ವೈದ್ಯಕೀಯ ಅನುಮಾನಸ್ಪಾದ ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಲಾಗುವುದು.ಅಲ್ಲದೆ ಸ್ವಯಂ ಇಚ್ಚಾಸಕ್ತಿಯಿಂದಲೂ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದರು.
ಸರ್ಕಾರದ ಮುಂದಿನ ಆದೇಶದವರೆಗೂ ಪ್ರತಿದಿನ ಬೆಳಿಗ್ಗೆ ೧೦.೩೦ರಿಂದ ಮಧ್ಯಾಹ್ನ ೧.೩೦ರವರೆಗೆ ಪರೀಕ್ಷೆ ನಡೆಸಲಾಗುವುದು.ಆಯಾ ದಿನ ಸಂಗ್ರಹಿಸಲಾದ ಕಫಾ ಮತ್ತು ರಕ್ತವನ್ನು ಮೈಸೂರಿನ ಕೊರೊನಾ ಪರೀಕ್ಷಾಲಯಕ್ಕೆ ಕಳುಹಿಸಲಾಗುವುದು.ಪರೀಕ್ಷೆಯ ಪ್ರತಿಯೊಂದು ಪ್ರಕ್ರಿಯೆಗಳು ವೈದ್ಯಕೀಯ ನಿಯಮಾನುಸಾರವೇ ನೆಡೆಯುತ್ತವೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕ ಬೇಡ. ಕೊರೊನಾ ಮುಕ್ತ ತಾಲ್ಲೂಕು ಮಾಡುವುದೇ ನಮ್ಮ ಧ್ವೇಯ ಎಂದರು.
ಈ ವೇಳೆ ತಹಸೀಲ್ದಾರ್ ಕುಂಞ ಅಹಮ್ಮದ್, ತಾಪಂ ಇಒ ಅನಂತರಾಜು,ಪುರಸಭಾ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹಾಗೂ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್ ಇದ್ದರು.

ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ(ಮAಡ್ಯ)

Please follow and like us:

Related posts

Leave a Comment