ತಿಪಟೂರಿನಲ್ಲಿ ಕೂಲಿ ಕಾರ್ಮಿಕರ ಗೋಳು ಕೇಳೋರಿಲ್ಲ..! ನಿದ್ರೆಗೆ ಜಾರಿತಾ ತಾಲೂಕು ಆಡಳಿತ..?

ತಿಪಟೂರು(ತುಮಕೂರು):ಏಷ್ಯಾದ ದೊಡ್ಡ ಕೊಬ್ಬರಿ ಮಾರುಕಟ್ಟೆ ಎಂದು ಹೆಸರಾಗಿರುವ ತಿಪಟೂರಿನ ಎಪಿಎಂಸಿಯಲ್ಲಿ ದಿನನಿತ್ಯ ಮಹಿಳೆಯರು ಮತ್ತು ಮಕ್ಕಳು ಉಚಿತವಾಗಿ ದಿನಸಿ ಸಿಗಬಹುದೇನೋ ಎಂದು ಬೆಳಗಿನ ಜಾವವೇ ಆಗಮಿಸಿ ಕಾಯ್ದು ನಿರಾಸೆಯಿಂದ ಬರಿಗೈನಲ್ಲಿ ಮನೆಗೆ ಮರಳುತ್ತಿದ್ದು ಮರುಕಹುಟ್ಟಿಸುವಂತಿದೆ.
ಲಾಕ್‌ಡೌನ್ ಆದಾಗಿನಿಂದ ದಿನನಿತ್ಯ ದುಡಿದು ತಿನ್ನುವ ಜನರ ಜೊತೆಗೆ ಅಲ್ಪಸ್ವಲ್ಲ ಕೂಡಿಟ್ಟಿದ್ದ ಮದ್ಯಮವರ್ಗದವರು ಸಹ ಲಾಕ್‌ಡೌನ್ ಮುಗಿಯುವ ಮುನ್ನವೇ ಕೈಚೆಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.ಜೊತೆಗೆ ಕೊಬ್ಬರಿ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರದ್ದು ಕೂಡ ಇದೇ ಪರಿಸ್ಥಿತಿಯಾಗಿದೆ.
ಕಳೆದ ಭಾನುವಾರ ಎಪಿಎಂಸಿ ಆವರಣದಲ್ಲಿರುವ ವ್ಯಾಪಾರಿಗಳು ವಿವಿದ ಸಂಘಗಳ ಜೊತೆ ಸೇರಿ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಕುಟುಂಬದವರಿಗೆ ದಿನಸಿ ವಿತರಣೆ ಮಾಡಿದ್ದರು.ಆದರೆ ಅಂದು ಸುದ್ದಿ ತಿಳಿಯದೇ ಬಂದವರಿಗೆ ೫-೬ ಪ್ಯಾಕ್‌ಗಳನ್ನು ಕೊಟ್ಟಿದ್ದು ಸಿಗದವರಿಗೆ ನಾಳೆ ಕೊಡುತ್ತೇನೆಂದು ಹೇಳಿದ್ದರು.ಹೀಗಾಗಿ ಅಂದಿನಿAದ ಇಂದಿನವರೆಗೆ ಸುಮಾರು ೧೦೦-೧೫೦ ಮಂದಿ ಬೆಳಗ್ಗೆಯೇ ಸರದಿ ಸಾಲಿನಲ್ಲಿ ನಿಲುತ್ತಿದ್ದಾರೆ.
ಇನ್ನು ಸರತಿ ಸಾಲಿನಲ್ಲಿ ನಿಂತಿದ್ದ ಇಂದು ಅಲ್ಲಿದ್ದವರನ್ನು ವಿಚಾರಿಸಿದಾಗ ನಾವು ಕೂಡ ಕಾರ್ಮಿಕರಾಗಿದ್ದು, ಮೊನ್ನೆ ನಮಗೆ ದಿನಸಿ ಸಿಕ್ಕಿಲ್ಲ ಕೆಲವರು ೫-೬ ಪ್ಯಾಕೇಟ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಒಟ್ಟಿನಲ್ಲಿ ಸದ್ಯ ಈ ಕಾರ್ಮಿಕರು ಹಾಗೂ ಅವರ ಕುಟುಂಬದವರ ಪರಿಸ್ಥಿತಿ ನಿಜಕ್ಕೂ ಶೋಚನಿಯವಾಗಿದ್ದು,ಈಗಲಾದರೂ ಜಿಲ್ಲಾಡಳಿತ,ಎಪಿಎಂಸಿ ಸೇರಿದಂತೆ ತಿಪಟೂರು ತಹಶೀಲ್ದಾರ್ ಇತ್ತ ಗಮನಹರಿಸಬೇಕಾಗಿದೆ.

ಸಿ.ಎನ್.ಸಿದ್ದೇಶ್ವರ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)

Please follow and like us:

Related posts

Leave a Comment