ಬೆಂಗಳೂರಿನಲ್ಲಿ0ದು ಶತಕ ಬಾರಿಸಿದ ಕೊರೊನಾ..!

ಬೆಂಗಳೂರ :ರಾಜ್ಯದಲ್ಲಿ ಇಂದು ಒಂದೇ ದಿನ ಮತ್ತೆ ೧೮ ಜನರಿಗೆ ಕೊರೊನಾ ಸೋಂಕು ತಗುಲುವ ಮೂಲಕ ಮಹಾಮಾರಿ ವೈರಸ್ ತನ್ನ ಅಟ್ಟಹಾಸ ಮುಂದುವರೆಸಿದೆ.
ಸದ್ಯ ಬೆಂಗಳೂರು ಒಂದರಲ್ಲೇ ೧೦ ಜನರಿಗೆ ಹೊಸದಾಗಿ ಕೋವಿಡ್ ೧೯ ಸೋಂಕು ತಗುಲಿರೋದು ಪತ್ತೆಯಾಗಿದೆ.
ಇಂದು ಬೆಳಗ್ಗೆ ೧೧ ಗಂಟೆ ಸುಮಾರಿಗೆ ಹೊಂಗಸAದ್ರದಲ್ಲಿ ವಾಸವಾಗಿದ್ದ ಬಿಹಾರ ಮೂಲದ ಕಾರ್ಮಿಕನಿಗೆ ಕೊರೊನಾ ಸೋಂಕು ಇರೋದು ದೃಢಪಟ್ಟಿತ್ತು.ಇದರ ಬೆನ್ನಲ್ಲೇ ಆತನ ಒಡನಾಟದಲ್ಲಿರೋರ ಆರೋಗ್ಯ ತಪಾಸಣೆ ನಡೆಸಿದಾಗ ೯ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಅಂದ ಹಾಗೇ ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶದ ಪ್ರಕಾರ ನಗರದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ೧೦೧ ಆಗಿದೆ. ಒಟ್ಟಿನಲ್ಲಿ ನಿನ್ನೆ ೭ ಇದ್ದ ಬೊಮ್ಮನಹಳ್ಳಿ ವಲಯದ ಕೊರೊನಾ ಸೋಂಕಿತರ ಸಂಖ್ಯೆ ಈಗ ೧೭ ಆಗಿದೆ.
ಪಶ್ಚಿಮ ವಲಯದಲ್ಲಿ ಅತ್ಯಂತ ಹೆಚ್ಚು ಕೊರೊನಾ ಸೋಂಕಿತರಿದ್ದು ಸೋಂಕಿತರ ಪ್ರಮಾಣ ೨೯ ಕ್ಕೆ ಏರಿಕೆಯಾಗಿದೆ. ಒಟ್ಟು ಬೆಂಗಳೂರಿನಲ್ಲಿ ೧೦೦ ಕೊರೊನಾ ಪಾಸಿಟಿವ್, ೪೮ ಗುಣಮುಖರಾದವರು ಹಾಗೂ ನಾಲ್ವರು ಮೃತಪಟ್ಟಿದ್ದಾರೆ.
ಕಂಟೇನ್ಮೆAಟ್ ಜೋನ್‌ಗಳ ಪಟ್ಟಿಯಲ್ಲಿ ಹೊಂಗಸAದ್ರ ಸೇರ್ಪಡೆಯಾಗಿದೆ. ನಗರದಲ್ಲಿ ಪ್ರಾಥಮಿಕ ಸಂಪರ್ಕ ಪತ್ತೆಹಚ್ಚಿದ ಒಟ್ಟು ೭೪೮ ರಲ್ಲಿ ೪೫೦ ಕ್ವಾರಂಟೈನ್‌ನಲ್ಲಿದ್ದು, ದ್ವಿತೀಯ ಸಂಪರ್ಕದ ಒಟ್ಟು ೪೧೯೭ ರಲ್ಲಿ ೧೨೮೫ ಜನ ಕ್ವಾರಂಟೈನ್ ಅವಧಿಯಲ್ಲಿದ್ದಾರೆ.ಪಾಲಿಕೆಯ ಫೀವರ್ ಕ್ಲಿನಿಕ್‌ನಲ್ಲಿ ಒಟ್ಟು ೪೮೮೭ ಜನರ ಸ್ಕ್ರೀನಿಂಗ್ ನಡೆದಿದ್ದು, ೨೧ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.
ಇನ್ನು ನಿನ್ನೆ ಸಂಜೆ ವೇಳೆಗ ಕರ್ನಾಟಕ ರಾಜ್ಯಾದ್ಯಂತ ಕೊರೊನಾ ಕೇಸ್ ಗಳ ಸಂಖ್ಯೆ ೪೨೭ ಇತ್ತು. ಆದರೆ, ೨೪ ಗಂಟೆಯೊಳಗೆ ಈ ಸಂಖ್ಯೆ ೪೪೭ಕ್ಕೆ ಏರಿಕೆಯಾಗಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment