ಬಂಧಿಖಾನೆ ಎಡಿಜಿಪಿ ವಿರುದ್ಧ ಹೆಚ್‌ಡಿಕೆ ಗರಂ..

ಮೈಸೂರು: ಪಾದರಾಯಪುರಪುರದ ಗಲಭೆ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಇದರ ಹಿಂದೆ ಬಂಧಿಖಾನೆ ಎಡಿಜಿಪಿ ಅಲೋಕ್ ಮೋಹನ್ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಮೈಸೂರು ನಗರದಲ್ಲಿ ಮಾತನಾಡಿದ ಅವರು,ರಾಮನಗರ ಜೈಲಿಗೆ ಪಾದರಾಯನಪುರದ ಆರೋಪಿಗಳನ್ನು ಸ್ಥಳಾಂತರ ಮಾಡುವಲ್ಲಿ ಬಂಧಿಖಾನೆಯ ಎಡಿಜಿಪಿ ಅಲೋಕ್ ಮೋಹನ್ ಕೈವಾಡ ಇದೆ. ಅವರೇ ಆರೋಪಿಗಳನ್ನು ಸ್ಥಳಾಂತರ ಮಾಡಲು ಹೇಳಿದ್ದಾರೆ ಎಂದು ದೂರಿದರು.
ನಾನು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಅಲೋಕ್ ಮೋಹನ್ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಲು ಒತ್ತಡ ಹೇರಿದ್ದರು. ಅದಕ್ಕೆ ನಾನು ಒಪ್ಪರಲಿಲ್ಲ. ನನ್ನ ಮೇಲಿನ ದ್ವೇಷಕ್ಕೆ ಈ ರೀತಿ ಮಾಡಿದ್ದಾರೆ ಎನಿಸುತ್ತಿದೆ. ನನ್ನ ಮೇಲಿನ ದ್ವೇಷಕ್ಕೆ ರಾಮನಗರ ಜನತೆ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ.ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಈ ಆರೋಪಿಗಳನ್ನು ಕರೆದುಕೊಂಡು ಬಂದ ಎಲ್ಲಾ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಬೇಕು. ರಾಮನಗರದ ಜೈಲನ್ನು ಕ್ವಾರಂಟೈನ್ ಮಾಡಬೇಕೆಂದು ಆಗ್ರಹಿಸಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಮೈಸೂರು

Please follow and like us:

Related posts

Leave a Comment