ರಾಜ್ಯದಲ್ಲಿ ಹೊಸದಾಗಿ 29 ಕೊರೊನಾ ಕೇಸ್..

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸ ೨೯ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ.
ಕಳೆದ ೨೪ ಗಂಟೆಗಳಲ್ಲಿ ರಾಜ್ಯದ ಕೊರೊನಾ ಪೀಡಿತರ ಸಂಖ್ಯೆ ಒಟ್ಟು ೪೭೪ಕ್ಕೆ ಏರಿದ್ದು,ಇದರಲ್ಲಿ ಸಾವಿಗೀಡಾದವರ ಸಂಖ್ಯೆ ೧೮ ಮತ್ತು ಬಿಡುಗಡೆಯಾದವರ ಸಂಖ್ಯೆ ೧೫೨. ಸದ್ಯಕ್ಕೆ ರಾಜ್ಯದಲ್ಲಿ ೩೦೪ ಸಕ್ರಿಯ ಕೊರೊನಾ ಪೀಡಿತರು ಇದ್ದಾರೆ.ಇವರ ಪೈಕಿ ಐವರು ತೀವ್ರ ನಿಗಾ ಘಟಕದಲ್ಲಿದ್ದಾರೆ.
ಇನ್ನು ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಸಿಂಹಪಾಲು ರಾಜಧಾನಿ ಬೆಂಗಳೂರಿನಿAದಲೇ ವರದಿಯಾಗಿದೆ. ೨೯ ಜನರಲ್ಲಿ ೧೯ ಸೋಂಕು ಪ್ರಕರಣಗಳು ಬೆಂಗಳೂರು ನಗರದಲ್ಲಿ ದೃಢವಾಗಿದೆ.
ಬೆಂಗಳೂರಿನ ಸೋಂಕಿತ ಸಂಖ್ಯೆ ೪೧೯ರ ಸಂಪರ್ಕದಿAದ ಮತ್ತೆ ೧೧ ಜನರಿಗೆ ಸೋಂಕು ಹರಡಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೧೨೦ ಆಗಿದ್ದು, ೬೭ ಪ್ರಕರಣಗಳೂ ಸಕ್ರಿಯವಾಗಿದೆ.ವಿಜಯಪುರದಲ್ಲಿ ಮತ್ತೊಂದು ಸೋಂಕು ಪ್ರಕರಣ ದೃಢವಾಗಿದ್ದು, ಸೋಂಕಿತ ಸಂಖ್ಯೆ ೨೨೧ರ ಸಂಪರ್ಕದಿAದ ೨೭ ವರ್ಷದ ವ್ಯಕ್ತಿಗೆ ಸೋಂಕು ತಾಗಿದೆ.
ಬಾಗಲಕೋಟೆಯ ಮುದೋಳದ ಮತ್ತೋರ್ವ ಬಾಲಕನಿಗೆ ಸೋಂಕು ತಾಗಿದ್ದು, ಸೋಂಕಿತ ಸಂಖ್ಯೆ ೩೮೦ರ ಸಂಪರ್ಕದಿAದ ೧೪ ವರ್ಷದ ಬಾಲಕನಿಗೆ ಸೋಂಕು ದೃಢವಾಗಿದೆ.
ಇನ್ನು ರಾಜ್ಯದಲ್ಲಿ ಇಂದು ೩೮೨೬ ಪರೀಕ್ಷೆಗೆ ಒಳಪಡಿಸಲಾಗಿಯಿತು. ಇವುಗಳಲ್ಲಿ ೨೯ ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೪೭೪ಕ್ಕೆ ಏರಿಕೆಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು – ೧೯, ತುಮಕೂರು- ೦೧, ಬೆಳಗಾವಿ-೦೨, ವಿಜಯಪುರ-೦೨, ಬಾಗಲಕೋಟೆ-೦೩, ಮಂಡ್ಯ -೦೧ ಮತ್ತು ಚಿಕ್ಕಬಳ್ಳಾಪುರ-೦೧ ಕೊರೋನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ೪೭೪ಕ್ಕೆ ಏರಿಕೆಯಾಗಿದೆ. ಅಲ್ಲದೇ ಇದುವರೆಗೆ ರಾಜ್ಯದಲ್ಲಿ ಕೊರೋನಾ ಸೋಂಕಿನಿAದ ೧೮ ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ೧೫೨ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment