ಬಳ್ಳಾರಿ ಜಿಲ್ಲೆ : ಹಳ್ಳದಲ್ಲಿ ಬಿದ್ದು ಬಾಲಕ ಸೇರಿ ಇಬ್ಬರ ಸಾವು

ಬಳ್ಳಾರಿ: ದನ ಮೇಯಿಸಲು ಹೋಗಿದ್ದ ಇಬ್ಬರು ಹಳ್ಳದಲ್ಲಿ ಬಿದ್ದು ಸಾವನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬೂದುಗುಪ್ಪ ಬೂದುಗುಪ್ಪ ಗ್ರಾಮದ ಹಿರೇಹಳ್ಳದಲ್ಲಿ ಬಳಿ ನಡೆದಿದೆ.
ಅಮರನಾಥರೆಡ್ಡಿ (೧೩), ಡಿ.ನಾರಾಯಣರೆಡ್ಡಿ (೩೮) ಮೃತಪಟ್ಟವರಾಗಿದ್ದಾರೆ.ಮೂಲತಃ ಗುಡದೂರು ಗ್ರಾಮದ ನಿವಾಸಿ ಅಮರನಾಥರೆಡ್ಡಿ ರಜೆಗಾಗಿ ತನ್ನ ಅಜ್ಜಿ ಊರಾದ ಬೂದಗುಪ್ಪಕ್ಕೆ ಬಂದಿದ್ದ.ದನ ಮೇಯಿಸಲು ಹೋದಾಗ ಹಳ್ಳದಲ್ಲಿ ಕಾಲು ಜಾರಿ ಬಿದ್ದಿದ್ದಾನೆ.ಈತನನ್ನು ರಕ್ಷಿಸಲು ಹೋದ ಡಿ.ನಾರಾಯಣ ರೆಡ್ಡಿ ಸಹ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ. ಸ್ಥಳೀಯ ಯುವಕರು ರಕ್ಷಣೆಗೆ ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್ನು ಅಮರನಾಥ ರೆಡ್ಡಿ ರಜೆಯ ಹಿನ್ನೆಲೆಯಲ್ಲಿ ಅಜ್ಜಿಯ ಊರಾದ ಬೂದುಗುಪ್ಪ ಗ್ರಾಮಕ್ಕೆ ಬಂದಿದ್ದ.ಈ ವೇಳೆ ಆತನ ಮಾವ ನಾರಾಯಣ ರೆಡ್ಡಿ ಜೊತೆ ದನಮೇಯಿಸಲು ಹೋದಾಗ ಈ ಘಟನೆ ನಡೆದಿದೆ.
ಅಲ್ಲದೆ, ಬಾಲಕ ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದು, ಈಜು ಬಾರದ ಕಾರಣ ನೀರಿನಲ್ಲಿ ಒದ್ದಾಡಿ ಮೃತಪಟ್ಟಿದ್ದಾನೆ.ಇದಾದ ಬಳಿಕ ಬಾಲಕ ನೀರಿನಲ್ಲಿ ತೇಲುತ್ತಿದ್ದನ್ನು ನೋಡಿ ನಾರಾಯಣ ರೆಡ್ಡಿ ನೀರಿಗೆ ಜಿಗಿದು ಪಾರುಮಾಡಲು ಯತ್ನಿಸಿದ್ದಾನೆ.ಆದರೆ ಆತ ಕೂಡ ಈಜು ಬಾರದೇ ಸಾವು ಕಂಡಿದ್ದಾನೆನ್ನಲಾಗಿದೆ. ಈ ಸಂಬAಧ ಸಿರಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ಬಳ್ಳಾರಿ

Please follow and like us:

Related posts

Leave a Comment