ಶಾಮಿಯಾನ ಅಂಗಡಿ ಮಾಲೀಕರು,ಕಾರ್ಮಿಕರಿಗೆ ನೆರವು ಕೊಡಿ..

ಸಿಂಧನೂರು(ರಾಯಚೂರು): ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸ ಇಲ್ಲದೇ ಆರ್ಥಿಕ ಹೊರೆಯನ್ನು ಅನುಭವಿಸುತ್ತಿರುವ ಶಾಮಿಯಾನ ಲೈಟಿಂಗ್ ಮತ್ತು ಸೌಂಡ್ಸ್ ಡೆಕೋರೇಷನ್ ವೃತ್ತಿ ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ ಅನುದಾನದ ನೆರವು ನೀಡಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ನಗರದ ತಹಶೀಲ್ದಾರ್ ಕಚೇರಿ ಎದುರು ಸಿಂಧನೂರು ತಾಲೂಕು ಶಾಮಿಯಾನ ಲೈಟಿಂಗ್ ಮತ್ತು ಸೌಂಡ್ಸ್ ಡೆಕೋರೇಷನ್ ವೆಲ್ ಫೇರ್ ಅಸೋಸಿಯೇಷನ್ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಶಾಮಿಯಾನ ಲೈಟಿಂಗ್ ಮತ್ತು ಸೌಂಡ್ಸ್ ಡೆಕೋರೇಷನ್ ವೆಲ್ ಫೇರ್ ಅಸೋಸಿಯೇಷನ್ ಸಂಘಟನೆಯ ತಾಲೂಕು ಅಧ್ಯಕ್ಷ ವಿ.ವೀರಯ್ಯ ಶೆಟ್ಟಿ ಮಾತನಾಡಿ,ತಾಲೂಕುನಾದ್ಯಾಂತ ಸುಮಾರು ೧೩೦ ಅಂಗಡಿಗಳ ಮಾಲೀಕರು ಮತ್ತು ೩೦೦ ಕಾರ್ಮಿಕರು ಹಾಗೂ ಅವರ ಕುಟುಂಬದವರು ಈ ವೃತ್ತಿಯನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ.ಆದರೆ ಲಾಕ್‌ಡೌನ್ ಪರಿಣಾಮ ಕೆಲಸ ಇಲ್ಲದೇ ಆರ್ಥಿಕ ಹೊರೆಯನ್ನು ಅನುಭವಿಸುತ್ತಿದ್ದು,ಕೂಡಲೇ ಸರ್ಕಾರ ನೆರವು ನೀಡಲು ಒತ್ತಾಯಿಸಿದರು…
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾವು, ಮುಸ್ತಫಾ,ನಾಗರಾಜ್,ಸಿದ್ಧನಗೌಡ ಗೋರೆಬಾಳ್ಳ ಸೇರಿದಂತೆ ಅನೇಕರು ಹಾಜರಿದ್ದರು.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment