ಬೆಂಕಿ ಅವಘಡದಲ್ಲಿ ಟ್ರ‍್ಯಾಕ್ಟರ್ ಸುಟ್ಟು ಕರಕಲು, ಮಾಲೀಕನ ನೆರವಿಗೆ ಧಾವಿಸಿದ ಶಾಸಕ..

ಮಾನವಿ(ರಾಯಚೂರು): ಮಾನವಿ ತಾಲ್ಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಬೆಂಕಿ ತಗುಲಿ ಟ್ರ‍್ಯಾಕ್ಟರ್ ಸಂಪೂರ್ಣ ಸುಟ್ಟು ಹೋಗಿದೆ.ಸದ್ಯ ಇದನ್ನೇ ಜೀವನದ ಆಧಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಆ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ..
ಆದರೀಗ ಸಂಕಷ್ಟಕ್ಕೆ ಒಳಗಾದ ಆ ಟ್ರಾö್ಯಕ್ಟರ್ ಮಾಲೀಕನ ಕುಟುಂಬಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ ಸಹಾಯಸ್ತ ಚಾಚಿದ್ದಾರೆ.
ಅಂದ ಹಾಗೇ ವೈಯಕ್ತಿಕವಾಗಿ ಶಾಸಕರು, ೨೦ ಸಾವಿರ ಹಣವನ್ನು ಪರಿಹಾರವಾಗಿ ಟ್ರಾö್ಯಕ್ಟರ್ ಮಾಲೀಕ ಹಾಗೂ ರೈತ ಚನ್ನಬಸವ ಹೂಗಾರ್‌ಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಮುಖಂಡ ರಾಜಾ ರಾಮಚಂದ್ರ ನಾಯಕ, ಪುರಸಭೆ ಸದ್ಯಸರಾದ ಭಾಷ ಸಾಬ್, ತನ್ವೀರ್ ವಕೀಲ, ಶರಣಪ್ಪ ಮೇದ್,ಇಬ್ರಾಹಿಂ ಖುರೀಷ, ಶಿವರಾಜ ನಾಯಕ, ಹನುಮಂತ ಭೋವಿ,ಮುಂಖಡರಾದ ವೆಂಕಟ ನರಸಿಂಹ ಗೌಡ, ಗೋಪಾಲ ನಾಯಕ ಹರವಿ ಸೇರಿದಂತೆ ಅನೇಕರು ಉಪಸ್ಥಿತಿರಿದ್ದರು..

ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಮಾನವಿ(ರಾಯಚೂರು)

Please follow and like us:

Related posts

Leave a Comment