ಪಾವಗಡ ಬಳಿ ಉರುಳಿಬಿದ್ದ ಗ್ಯಾಸ್ ಟ್ಯಾಂಕರ್

ಪಾವಗಡ(ತುಮಕೂರು):ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಉರುಳಿಬಿದ್ದ ಪರಿಣಾಮ, ಅಪಾರ ಪ್ರಮಾಣದ ಅಡುಗೆ ಅನಿಲ ಸೋರಿ ಹೋಗಿರುವ ಘಟನೆ ಪಾವಗಡ ತಾಲೂಕಿನ ದೊಮ್ಮತಮರಿಯಲ್ಲಿ ನಡೆದಿದೆ.
ಇನ್ನು ಟ್ಯಾಂಕರ್‌ನಿAದ ಹೊರ ಬರುತ್ತಿರೋ ಅಡುಗೆ ಅನಿಲ, ಗ್ರಾಮದ ತುಂಬೆಲ್ಲ ಹರಡಿಕೊಂಡಿದೆ. ಇದರಿಂದಾಗಿ ಗ್ರಾಮದಲ್ಲಿದ್ದ ೨೦೦ ಮನೆಗಳ ಜನರು ಮನೆ ಬಿಟ್ಟು ದೂರ ಓಡಿ ಹೋಗಿದ್ದಾರೆ.
ಇದೇ ವೇಳೆ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ, ಅಡುಗೆ ಅನಿಲ ಸೋರಿಕೆ ಆಗುವುದನ್ನು ತಡೆಗಟ್ಟಲು ಹರಸಾಹಸಪಟ್ಟರೂ ಸಾಧ್ಯವಾಗಿಲ್ಲ.

ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ(ತುಮಕೂರು)

Please follow and like us:

Related posts

Leave a Comment