ಅಗಲಿದ ಪತ್ರಕರ್ತನಿಗೆ ಭಾವಪೂರ್ಣ ಶ್ರದ್ಧಾಂಜಲಿ

ಲಿ0ಗಸೂಗೂರು(ರಾಯಚೂರು):ಪಾದರಾಯನಪುರ ಗಲಭೆಯ ಆರೋಪಿಗಳನ್ನು ರಾಮನಗರದ ಕಾರಾಗೃಹಕ್ಕೆ ಕರೆ ತಂದ ಬಗ್ಗೆ ಸುದ್ದಿ ಮಾಡಿ ಬರುತ್ತಿದ್ದ ಸಂದರ್ಭದಲ್ಲಿ ಹಿಂದಿನಿ0ದ ಬಂದ ಎಟಿಎಂಗೆ ಹಣ ತುಂಬುವ ವಾಹನ ಡಿಕ್ಕೆ ಹೊಡೆದ ಪರಿಣಾಮದಿಂದ ಖಾಸಗಿ ಸುದ್ದಿವಾಹಿನಿಯ ವರದಿಗಾರ ಹನುಮಂತು ನಿಧನ ಹೊಂದಿದ್ದರು.
ಹೀಗಾಗಿ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪತ್ರಕರ್ತರು ನಿನ್ನೆ ವರದಿಗಾರ ಹನಮಂತು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ದೇವಪ್ಪ ರಾಠೋಡ್,ಖಾಸಗಿ ವಾಹಿನಿಯಲ್ಲಿ ಕಾರ್ಯನಿವಹಿಸುತ್ತಿದ್ದ ರಾಮನಗರದ ವರದಿಗಾರ ಹನುಮಂತು ನಮ್ಮನ್ನು ಬಿಟ್ಟು ಅಗಲಿದ್ದಾರೆ.ಅವರ ಆತ್ಮಕ್ಕೆ ಚಿರ ಶಾಂತಿ ದೊರಕಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ನಂತರ ಮಾತನಾಡಿದ ಹಿರಿಯ ಪತ್ರಕರ್ತ ಶರಣಯ್ಯ ಬಿ ಒಡೆಯರ್,ಹನುಮಂತು ಒಬ್ಬ ಕ್ರಿಯಾಶೀಲ ಪತ್ರಕರ್ತ ಅವರ ಅಗಲಿಕೆಗೆ ದೃಶ್ಯ ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮ ಕಂಬನಿ ಮಿಡಿದಿದೆ.ಪತ್ರಿಕಾಧರ್ಮವನ್ನು ಎತ್ತಿ ಹಿಡಿಯುವ ಇಂತಹ ತನಿಖಾ ವರದಿಗಾರರಿಗೆ ಭದ್ರತೆ ಇಲ್ಲವಾಗಿದೆ. ಇಂದು ದೇಶದಲ್ಲಿ ಒಂದಲ್ಲಾ ಒಂದು ಕಡೆ ಪತ್ರಕರ್ತರ ಮೇಲೆ ಹಲ್ಲೆ ನಡೆಯುತ್ತಿದೆ.ಸರ್ಕಾರ ಪತ್ರಕರ್ತರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು.ಪತ್ರಕರ್ತರಿಗೆ ನಿರ್ಭೀತ ವಾತಾವರಣವನ್ನು ಸೃಷ್ಟಿಸಬೇಕು ಎಂದು ಹೇಳಿದರು.
ಪತ್ರಕರ್ತರಾದ ಹನುಮಂತ ನಾಯಕ್, ನಾಗರಾಜ್ ಎಸ್ ಮಡಿವಾಳರ್, ಅಮರೇಶ್ ಕಡಿ, ಮಹಿಬೂಬ್ ಸಾಬ ಇದ್ದರು.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Please follow and like us:

Related posts

Leave a Comment