ಹುಬ್ಬಳ್ಳಿಯಲ್ಲಿ ನಿರಾಶ್ರಿತರಿಗೆ ದಿನಸಿ ಕಿಟ್ ವಿತರಣೆ

ಹುಬ್ಬಳ್ಳಿ :ನಗರದ ಗೋಕುಲರಸ್ತೆಯ ನಿರಾಶ್ರಿತರಿಗೆ ಪಿ ಆ್ಯಂಡ್ ಜಿ ಮೇಡಿಯಾ ಕಮ್ಯುನಿಕೇಷನ್ ಹಾಗೂ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಸಂಸ್ಥೆಯ ಮುಖ್ಯಸ್ಥ ಗುರುರಾಜ್ ಹೂಗಾರ ಅವರ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು, ನಿರಾಶ್ರಿತರು, ಆಟೋ ಚಾಲಕರು ಸೇರಿದಂತೆ ಕಡುಬಡ ಕುಟುಂಬಗಳಿಗೆ ಅಕ್ಕಿ, ಬೆಳೆಕಾಳು, ಸಕ್ಕರೆ, ಹುರಿಗಡಲೆ, ಕಡಲೆಕಾಳು, ಸಾಂಬರ್ ಪೌಡರ್, ಉಪ್ಪು ಹಾಗೂ ಸನ್ ಪ್ಯೂಟರ್ ಆಯಿಲ್, ಅವಲಕ್ಕಿ, ಚಹಾ ಪುಡಿ ಹೊಂದಿರುವ ಪ್ಯಾಕೇಟ್‌ಗಳನ್ನು ವಿತರಣೆ ಮಾಡಿದರು.
ಕೊರೊನಾ ವೈರಸ್‌ನಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ, ಸಾವಿರಾರು ಸಂಖ್ಯೆಯಲ್ಲಿ ಸಾವು-ನೋವು ಸಂಭವಿಸುತ್ತಿದೆ.ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿಗಳು ಮೊದಲೇ ಎಚ್ಚೆತ್ತು ದೇಶವನ್ನು ಲಾಕ್‌ಡೌನ್ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಬಡವರು, ಕೂಲಿಕಾರ್ಮಿಕರು, ನಿರಾಶ್ರಿತರಿಗೆ ಸಾಕಷ್ಟು ತೊಂದರೆಯಾಗಿದೆ.ಜತೆಗೆ ಕೊರೊನಾ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಎಚ್ಚರ ವಹಿಸಬೇಕಾಗಿದೆ. ಆದ್ದರಿಂದ ಇಂದು ಸಂಜೆ ಪತ್ರಿಕೆ ವತಿಯಿಂದ ಸಾರ್ವಜನಿಕರಿಗೆ ದವಸ ಧಾನ್ಯಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ.
ಇದೇ ವೇಳೆ ಗುರುರಾಜ ಹೂಗಾರ್ ಮಾತನಾಡಿ,ಕೊರೊನಾದಿಂದ ಜನತೆ ಸಂದಿಗ್ನ ಪರಿಸ್ಥಿತಿಯಲ್ಲಿ ಸಿಲುಕಿರುವ ಸಂದರ್ಭದಲ್ಲಿ ದಾನಿಗಳು ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡುವ ಮೂಲಕ ಬಡವರ ಕುಟುಂಬ ನಿರ್ವಹಣೆಗೆ ನೆರವಾಗಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರು ಕೊರೊನಾ ವೈರಸ್ ಬಗ್ಗೆ ಜಾಗೃತಿಯಿಂದ ಇರಬೇಕು, ಪ್ರಧಾನಿಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಕರೆ ನೀಡಿರುವ ಲಾಕ್ ಡೌನ್ ನನ್ನು ನಾವೆಲ್ಲರೂ ಪಾಲನೆ ಮಾಡಬೇಕು, ಮನೆಯಲ್ಲಿಯೇ ಇದ್ದು ಕೊರೊನಾವನ್ನು ತೊಲಗಿಸಬೇಕು, ಪ್ರತಿಯೊಬ್ಬರು ಮಾಸ್ಕ್ಗಳನ್ನು ಧರಿಸಬೇಕು, ಹೊರಗಿಂದ ಮನೆಗೆ ಬಂದಾಗ ಸ್ಯಾನಿಟೈಸೆರ್ ನಿಂದ ಕೈತೊಳೆಯಬೇಕು ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಕೊರೊನಾ ಬಗ್ಗೆ ಪ್ರತಿಯೊಬ್ಬರು ಜಾಗೃತಿಯಿಂದ ಇರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೋಕುಲ ರೋಡ್ ಪೋಲಿಸ್ ಠಾಣೆ ಇನ್ಸ್ಪೆಕ್ಟರ್ ನಾಗರಾಜ ಕೆ. ಮಾಂತೇಶ ಹೂಗಾರ್, ಮಂಜು ಮುಂದಿನಮನಿ, ಅಶೋಕ ತಾಳಿಕೋಟಿ, ಆನಂದ ಮುಂದಿನಮನಿ ಸೇರಿದಂತೆ ಮುಂತಾದವರು ಇದ್ದರು.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment