2 ಸಾವಿರ ಬಡವರಿಗೆ ದಿನಸಿ ಕಿಟ್ ವಿತರಣೆ

ಕೆ.ಆರ್.ಪುರ(ಬೆಂ.ನಗರ):ಕೊರೊನಾದಿAದಾಗಿ ಲಕ್ ಡೌನ್ ಹಿನ್ನೆಲೆಯಲ್ಲಿ ಬಡಜನರು ಹಸಿವಿನಿಂದ ನರಳಬಾರದು ಪ್ರತಿಯೊಬ್ಬರಿಗೂ ಬೇಕಾದ ತರಕಾರಿ ಹಾಗೂ ದಿನಸಿಗಳ ವಿತರಣೆ ಮಾಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದ್ದಾರೆ.
ಬೆಂಗಳೂರಿನ ಕೃಷ್ಣರಾಜಪುರ ಕ್ಷೇತ್ರದ ವಿಜ್ಞಾನನಗರ ವಾರ್ಡಿನಲ್ಲಿ ಸಮಾಜ ಸೇವಕ ಲೋಕೇಶ್ ಗೌಡ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ೨ ಸಾವಿರ ಬಡವರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಲಾಕ್‌ಡೌನ್‌ನಿಂದಾಗಿ ಮನೆಯಲ್ಲೆ ಇರುವವರಿಗೆ ಬೇಕಾದ ದಿನಸಿ,ತರಕಾರಿಗಳನ್ನು ನೀಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದರು.
ಇನ್ನೂ ಕೆಲವು ದಿನಗಳು ಜನರು ಮನೆಯಲ್ಲಿಯೇ ಇದ್ದು,ಅಂಗಡಿಗಳಿಗೆ ಬಂದಾಗ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಮನವಿ ಮಾಡಿದರು.
ಸಮಾಜ ಸೇವಕ ಲೋಕೇಶ್ ಗೌಡ ಮಾತನಾಡಿ,ಮನೆಯಲ್ಲೆ ಇದು ಕಷ್ಟದಲ್ಲಿರುವ ಕೂಲಿ ಕಾರ್ಮಿಕರು, ಚಾಲಕರು, ಬಡವರಿಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ಕೊಡುತ್ತಿದ್ದು,ಲಾಕ್‌ಡೌನ್ ಪ್ರಾರಂಭದಿAದಲೂ ನಾವು ಪ್ರತಿ ದಿನ ಜನರ ಕಷ್ಟಕ್ಕೆ ಸ್ಪಂದಿಸುತ್ತಿದೇವೆ.ಇAದು ಸಹ ಸುಮಾರು ಎರಡು ಸಾವಿರ ಬಡ ಜನರಿಗೆ ದಿನಸಿ ವಿತರಣೆ ಮಾಡಲಾಗಿದೆ ಎಂದರು.
ವಿತರಣೆ ವೇಳೆ ಮುಖಂಡರಾದ ಕೆ.ಎನ್. ಶ್ರೀಧರ್,ಮಂಜುಳಾ ಲೋಕೆಶ್ ಗೌಡ, ಉಮೇಶ್, ಚರಣ್ ರಾಜ್, ಸೋಯಲ್ ಹಾಜರಿದ್ದರು.

ಕೆ.ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರ (ಬೆಂ.ನಗರ)

Please follow and like us:

Related posts

Leave a Comment