ಆರೋಗ್ಯ / HEALTH

ನಾಳೆ ಸಂಪುಟ ಸಭೆ,ಮೈಸೂರು ಲಾಕ್‌ಡೌನ್ ಬಗ್ಗೆ ಗಂಭೀರ ಚರ್ಚೆ

Published

on

ನಂಜನಗೂಡು(ಮೈಸೂರು): ಮೈಸೂರು ಜಿಲ್ಲೆ ಮತ್ತು ನಂಜನಗೂಡನ್ನು ಕೊರೊನಾ ಮುಕ್ತ ಮಾಡಬೇಕಾಗಿದೆ,ಅದಕ್ಕಾಗಿ ಸ್ವಲ್ಪ ಕಾಲಾವಕಾಶ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಇಂದು ನಂಜನಗೂಡಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ ಪೋರ್ಸ್ ಸಭೆ ನಡೆಸಿ ಮಾತನಾಡಿದ ಅವರು,ರಾಜ್ಯದಲ್ಲೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿದ್ದ ಜಿಲ್ಲೆಯಲ್ಲಿ ಈಗ ಸಂಖ್ಯೆ ಕಡಿಮೆ ಮೆಯಾಗಿದೆ ಅದಕ್ಕೆ ಇಲ್ಲಿನ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿ ಅವರ ಒಂದು ದಿಟ್ಟ ನಿರ್ಧಾರ ಮತ್ತು ಸಹಭಾಗಿತ್ವದ ಕೆಲಸವೇ ಕಾರಣ ಇದರ ಜೊತೆಗೆ ಇಲ್ಲಿನ ಶಾಸಕರು ಕೂಡ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಕೈಜೋಡಿಸಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಅಲ್ಲದೆ ಈ ಕಾರ್ಯದಲ್ಲಿ ಪ್ರಾಮಾಣಿಕವಾಗಿ ದುಡಿದ ವೈದ್ಯರು ದಾದಿಯರು ಆಶಾ ಕಾರ್ಯಕರ್ತೆಯರು ಪೋಲೀಸ್ ಹಾಗೂ ಪೌರಕಾರ್ಮಿಕರನ್ನು ಅಭಿನಂದಿಸಲೇಬೇಕು.ಈಗಾಗಲೇ ಮೇ ಮೂರರವರೆಗೆ ಲಾಕ್‌ಡೌನ್ ಇದ್ದು ಅಲ್ಲಿಯವರೆಗೆ ಏನೂ ಮಾಡಲಾಗದು ನಾಳೆ ಸಿಎಂ ಸಂಪುಟ ಸಭೆ ಕರೆದಿದ್ದಾರೆ.ಅಲ್ಲಿ ಮುಂದಿನ ನಿರ್ಧಾರದ ಬಗ್ಗೆ ಮಾತನಾಡುವುದಾಗಿ ತಿಳಿಸಿದರಲ್ಲದೆ, ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು
ಇದಕ್ಕೂ ಮುನ್ನ ಸಭೆಯಲ್ಲಿ ನಂಜನಗೂಡಿನ ಟಾಸ್ಕ್ ಪೋರ್ಸ್ ಅಧಿಕಾರಿಗಳಾದ ತಹಸಿಲ್ದಾರ್ ನಗರಸಭೆ ಆಯುಕ್ತ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಆರೋಗ್ಯಾಧಿಕಾರಿ ಡಿವೈಎಸ್ಪಿ ಸೇರಿದಂತೆ ತಮ್ಮ ಇಲಾಖೆಯಿಂದ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಅಂಕಿ-ಅAಶಗಳ ಸಮೇತ ವಿವರಣೆ ನೀಡಿದರು.
ಸಭೆಯಲ್ಲಿ ಶಾಸಕ ಹರ್ಷವರ್ಧನ್ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
ಇದೇ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರ ಕೋರಿಕೆ ಮೇರೆಗೆ ೨೦೦೦೦ ಮಾಸ್ಕ್ ಹಾಗೂ ತಾಲೂಕಿನಾದ್ಯಂತ ಸೀಲ್ ಡೌನ್
ಆಗಿರುವ ಪ್ರದೇಶಗಳ ಸುಮಾರು ಎರಡು ಸಾವಿರ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ಶಾಸಕ ರಿಗೆ ಹಸ್ತಾಂತರಿಸಿದರು.

ಮೋಹನ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು(ಮೈಸೂರು)

Click to comment

Trending

Exit mobile version